ಹೊಸದಿಲ್ಲಿ: ಕಾರ್ಗಿಲ್ ಕದನದ ವಿಜಯ ಮುಂದಿನ ತಿಂಗಳು 20 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ದಿಲ್ಲಿಯಿಂದ ಜಮ್ಮು ಕಾಶ್ಮೀರದ ದ್ರಾಸ್ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಸೇನೆ ಹಮ್ಮಿಕೊಂಡಿದೆ. ಈ ವರ್ಷ ಜುಲೈ 25 ರಿಂದ ಮೂರು ದಿನಗಳವರೆಗೆ ಸಂಭ್ರಮಾಚರಣೆ ನಡೆಸಲಾಗುತ್ತದೆ. ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ಹಲವು ಪೂರಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದ್ದು, ಇವು ಜುಲೈ ಮೊದಲ ವಾರದಿಂದಲೇ ಆರಂಭವಾಗಲಿವೆ.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಜಯ ಜ್ಯೋತಿ ಬೆಳಗಿಸುವ ಮೂಲಕ ಜುಲೈ 14 ರಂದು ಕಾರ್ಯಕ್ರಮಗಳು ಆರಂಭವಾಗಲಿವೆ. ಈ ವಿಜಯ ಜ್ಯೋತಿಯು 11 ಪಟ್ಟಣಗಳ ಮೂಲಕ ಸಾಗಿ ಜಮ್ಮು ಕಾಶ್ಮೀರದ ದ್ರಾಸ್‌ಗೆ ಪಯಣಿಸಲಿದೆ. ಇಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಜ್ಯೋತಿಯನ್ನು ವಿಲೀನಗೊಳಿಸಲಾಗುತ್ತದೆ. ಈ ತಂಡವು 11 ಪಟ್ಟಣಗಳಲ್ಲೂ ದೇಶಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಸೇನೆ ಹೇಳಿದೆ.
Advertisement