Advertisement

ಕಾಸರಗೋಡು ಜಿಲ್ಲೆಯಾದ್ಯಂತ ಸಂಭ್ರಮದ ಯೋಗ ದಿನ ಆಚರಣೆ

12:32 AM Jun 22, 2019 | Team Udayavani |

ಕಾಸರಗೋಡು: ಯೋಗವು 5,000 ವರ್ಷಗಳ ಇತಿಹಾಸವುಳ್ಳ ಜ್ಞಾನ ಭಂಡಾರ. ಯೋಗ ಎಂದರೆ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿಸುವ ಅತ್ಯಂತ ಪ್ರಾಚೀನ ಶಾಸ್ತ್ರ. ಪತಂಜಲಿ ಮಹರ್ಷಿಗಳು ಆರಂಭಿಸಿದ ಯೋಗ ಶಾಸ್ತ್ರವು ಇಂದು ಪ್ರಪಂಚದಾದ್ಯಂತ ಮಾನ್ಯತೆ ಪಡೆದುಕೊಂಡು ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

Advertisement

ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ಭಾವನಾತ್ಮಕ ಎಂಬ ಪಂಚಮುಖೀ ನೆಲೆಗಳಲ್ಲಿ ವ್ಯಕ್ತಿಯ ಸಕಾರಾತ್ಮಕ ಪರಿವರ್ತನೆಯನ್ನು ತರಬಲ್ಲ, ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ಶಾಸ್ತ್ರವಾಗಿರುವ ಯೋಗ ಶಾಸ್ತ್ರದ ಅಷ್ಟ ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳ ನಿಯಮಿತ ಅಭ್ಯಾಸದಿಂದ ಉದ್ದೇಶಿತ ಪರಿಣಾಮಗಳನ್ನು ಪಡೆದುಕೊಳ್ಳಲು ಸಾಧ್ಯ.

ಯೋಗದ ಮೂಲಕ ವಿಶ್ವವನ್ನು ಜೋಡಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಸರಕಾರದ ಕನಸಿಗೆ ಅಗಾಧ ಬೆಂಬಲ ಸಿಕ್ಕಿದ್ದು, ಶುಕ್ರವಾರ ವಿಶ್ವದಾದ್ಯಂತ ಐದನೇ ಬಾರಿ ಯೋಗ ದಿನವನ್ನು ಆಚರಿಸಲಾಯಿತು.

ಕಾಸರಗೋಡು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಮಹಿಳಾ ಸಮಾಜ, ಕಾಲೇಜು ಮೊದಲಾದವುಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಜಿಲ್ಲೆಯ ಯೋಗಾಸನ ಕೇಂದ್ರಗಳಲ್ಲೂ ವಿಶ್ವ ಯೋಗ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕೆಲವೆಡೆ ಒಂದು ವಾರಗಳ ಕಾಲ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಯೋಗದ ಬಗ್ಗೆ ತರಗತಿ, ಪ್ರದರ್ಶನಗಳು ನಡೆದವು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್‌ ಇಲಾಖೆ ವತಿಯಿಂದ ಶುಕ್ರವಾರ ಬೆಳಗ್ಗೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ವರೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಗ ಪ್ರದರ್ಶನ ನಡೆಯಿತು.

Advertisement

ಬದಿಡಯ್ಕದಲ್ಲಿ ಯೋಗ ದಿನ: ಇಲ್ಲಿನ ಕುನಿಲ್ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಆರ್ಟ್‌ ಆಫ್‌ ಲಿವಿಂಗ್‌ ಪತಂಜಲಿ ತರಬೇತಿದಾರ ರೇಜಿ ಶ್ರೀಮಂಗಳಂ ಅವರು ಶಾಲಾ ಮಕ್ಕಳಿಗೆ ಯೋಗ ತರಬೇತಿ ನೀಡಿದರು.

ಸಿ.ಇ.ಒ. ವಿಕ್ರಮ್‌ ದತ್ತ್, ಪ್ರಾಂಶುಪಾಲೆ ಪಿ.ವಿ. ರತಿ, ಸಿಸ್ಟರ್‌ ಜೀವಾ ಚಾಕೋ, ಪಿಇಟಿ ಶಿಕ್ಷಕ ರಾಜು, ಮ್ಯಾನೇಜರ್‌ ಪ್ರಶಾಂತ್‌ ಕೆ.ಪಿ. ಹಾಗೂ ಶಾಲಾ ಸಿಬಂದಿಯೋಗ ತರಬೇತಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next