Advertisement

ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಆಯುಧ ಪೂಜೆ

11:43 PM Oct 09, 2019 | Team Udayavani |

ಮಡಿಕೇರಿ: ನವರಾತ್ರಿ ಉತ್ಸವದ ಒಂಭತ್ತನೇ ದಿನದ ಆಯುಧಪೂಜಾ ಉತ್ಸವವನ್ನು ಕೊಡಗು ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಜಾತಿ ಧರ್ಮಗಳ ಭೇದವಿಲ್ಲದೆ ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಗಳು ನೆರವೇರಿದವು. ಜಿಲ್ಲಾ ಕೇಂದ್ರ ಮಡಿಕೇರಿ, ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಸೋಮವಾರಪೇಟೆ, ಸುಂಟಿಕೊಪ್ಪಗಳಲ್ಲಿ ಆಯುಧ ಪೂಜೆಯ ಪ್ರಯುಕ್ತ ವಾಹನ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದರೆ, ದೇಗುಲಗಳಲ್ಲಿ ಭಕ್ತಾದಿಗಳು ವಿಶೇಷ ಪೂಜೆಗಳನ್ನು ಸಲ್ಲಿಸಿ ಪುನೀತರಾದರು. ಗಾಂಧಿ ಮೈದಾನದಲ್ಲಿ ದ್ವಿಚಕ್ರ ಸೇರಿದಂತೆ ಭಾರೀ ವಾಹನಗಳ ಅಲಂಕಾರ ಸ್ಪರ್ಧೆ ಗಮನ ಸಳೆೆಯಿತು. ದಸರಾ ಮಂಟಪಗಳನ್ನು ಮೀರಿಸುವಂತೆ ಅಲಂಕೃತಗೊಂಡ ವಾಹನಗಳು ನೋಡುಗರ ಗಮನ ಸೆಳೆದವು.

Advertisement

ವಿವಿಧ ವಾಹನಗಳಲ್ಲಿ ಕಾವೇರಿ, ಗಣಪತಿ ಸೇರಿದಂತೆ ವಿವಿಧ‌ ಮೂರ್ತಿಗಳನ್ನು ಕುಳ್ಳಿರಿಸಿ, ವಿದ್ಯುದ್ದೀಪಗಳಿಂದ ಅಲಂಕರಿಸಿ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದುದು ವಿಶೇಷ.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ಆಯುಧ ಪೂಜಾ ಸಮಾರಂಭಕ್ಕೆ ಮಡಿಕೇರಿ ಡಿವೈಎಸ್‌ಪಿ ದಿನೇಶ್‌ ಕುಮಾರ್‌ ಚಾಲನೆ ನೀಡಿ ದರು ಕಾರ್ಯಕ್ರಮವನ್ನು ಉದ್ದೇಶಿಸಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷರಾದ ಮಹೇಶ್‌ ಜೈನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದಸರಾ ಸಮಿತಿ ಕಾಯಾಧ್ಯಕ್ಷರಾದ ರಾಬಿನ್‌ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್‌, ನಗರಸಭೆ ಪೌರಾಯುಕ್ತರಾದ ಬಿ.ಎಲ್‌. ರಮೇಶ್‌, ಪೊಲೀಸ್‌ ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ, ದಸರಾ ಸಮಿತಿ ಗೌರವಾಧ್ಯಕ್ಷ ಟಿ.ಪಿ.ರಾಜೇಂದ್ರ, ಉಪಾಧ್ಯಕ್ಷ ನೆರವಂಡ ಜೀವನ್‌, ಕಾರ್ಯದರ್ಶಿ ಗಜೇಂದ್ರ, ರಾಕೇಶ್‌ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next