Advertisement

ಸಂಭ್ರಮಿಸಿದ ಖಗೋಳ ಪ್ರೇಮಿಗಳು

07:22 AM Jun 22, 2020 | Lakshmi GovindaRaj |

ಮಾಗಡಿ: ತಾಲೂಕಿನ ಖಗೋಳ ಪ್ರೇಮಿಗಳು ಖಗೋಳ ಪ್ರೇಮಿಗಳು ಕಂಕಣ ಸೂರ್ಯಗ್ರಹಣ ವೀಕ್ಷಿಸಿ ಸಂಭ್ರಮಸಿದರು. ತಾಲೂಕಾದ್ಯಂತ ರಾಹುಗ್ರಸ್ಥ ಕಂಕಣ ಗ್ರಹಣ ಭಾಗಶಃ ಗೋಚಿರಿ ಸಿದ್ದು, ಭಾರೀ ಕುತೂಹಲದಿಂದ ಬಹುತೇಕ ಜನರು ಕನ್ನಡಕ, ಎಕ್ಸರೇ ಫಿಲಂ ಬಳಸಿ ವೀಕ್ಷಿಸಿ ದರು. ಕೆಲವರಂತೂ ಕೊರೊನಾ ಜತೆಗೆ ಕಂಕಣ ಗ್ರಹಣದ ಭೀತಿಯಿಂದ ಮನೆಯಿಂದ ಹೊರ ಬಾರದೆ ಮನೆಯಲ್ಲಿ ಕಾಲ ಕಳೆದರು.

Advertisement

ಭಾನುವಾರ ಗ್ರಹಣ ಸ್ಪರ್ಶ 10.15ಕ್ಕೆ ಆರಂಭಗೊಂಡು  ಮಧ್ಯಾಹ್ನ 1.30ಕ್ಕೆ ಮುಗಿಯಿತು. ಆದರೆ ಭಾಗಶಃ ಗ್ರಹಣ ಕಂಡಿದ್ದಾಗಿ ವೀಕ್ಷಕರು ಹೇಳಿದ್ದಾರೆ. ಭಾನುವಾರವಾಗಿದ್ದರಿಂದ ಕೆಲವರು ದೂರ ದರ್ಶನದ ಕೆಲವು ವಾಹಿನಿಗಳಲ್ಲಿ ಹೇಳುವ ಜ್ಯೋತಿಷಿಗಳ ಮಾತನ್ನು ಗಮನವಿಟ್ಟು ಆಲಿಸಿ ದರು.  ಕಂಕಣ ಸೂರ್ಯ ಗ್ರಹಣ ಮನುಕಲದ ಮೇಲೆ ವ್ಯತಿರಿತ್ಯ ಪರಿಣಾಮ ಬೀರುತ್ತದೆ ಎಂಬ ಜ್ಯೋತಿಷಿಗಳ ಮಾತಿನ ನಂಬಿಕೆಯಿಂದ ಮನೆ ಯಿಂದ ಹೊರಬರಲಿಲ್ಲ.

ಅದರಲ್ಲೂ ಗರ್ಭಿಣಿ ಯರು, ಮಕ್ಕಳು ವೃದಟಛಿರು ಮುಂಜಾಗ್ರತೆಯಿಂದ ಬೆಳಗ್ಗೆ 9ಕ್ಕೆ  ತಿಂಡಿ ಮುಗಿಸಿ, ಬಳಿಕ ಏನನ್ನು ತಿನ್ನದೆ, ಮಲಗದೆ ಮನೆಯಲ್ಲಿಯೇ ಕಾಲಕಳೆದರು. ಮಕ್ಕಳನ್ನು ಮನೆಯಿಂದ ಹೊರಬಾರದಂತೆ ಕಾಯ್ದುಕೊಂಡರು. ಕಂಕಣ ಗ್ರಹಣದಿಂದ  ಗಂಡಾಂತರಗಳು ಬಾರದಿರಲಿ ಎಂಬ ನಂಬಿಕೆಯಿಂದ ಕೆಲವರು  ದೇವರ ಪೂಜೆ ಪುರಸ್ಕಾರ  ನಡೆಸಿದರು.

ಕೆಲವು ಜ್ಯೋತಿಷಿಗಳು ಗ್ರಹಣ ಕಾಲದಲ್ಲಿ ಪುಷ್ಕರಣಿಗಳಲ್ಲಿ ತೊಟ್ಟಿಗಳ ನೀರಿನಲ್ಲಿ ಕುಳಿತು ಜಪತಪ ಮಾಡಿದರು. ತಾಲೂಕಿನ ಪ್ರಮುಖ ದೇವಸ್ಥಾನಗಳು ತೆರೆದಿರಲಿಲ್ಲ. ಮೋಕ್ಷ ನಂತರ ಅರ್ಚಕರ  ವೃಂದ ದೇವರುಗಳಿಗೆ ಅಭಿ ಷೇಕ, ಆರ್ಚನೆ ಪೂಜೆ ನೆರವೇರಿಸಿದರು. ಭಕ್ತರಿಗೆ ಅವಕಾಶವಿರಲ್ಲಿಲ್ಲ. ಗ್ರಹಣ ಮೋಕ್ಷ ನಂತರ ಮನೆ ಸ್ವತ್ಛಗೊಳಸಿದ ಮಹಿಳೆಯರು ಸ್ನಾನಮುಗಿಸಿ, ತಮ್ಮ ಇಷ್ಟದೇವರ ಪೂಜೆ ನೆರವೇರಿಸಿ ನಂತರ ಮನೆ  ಮಂದಿಯಲ್ಲ ಸೇರಿ ಊಟ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next