ಮಂಡ್ಯ: ಸ್ವಾತಂತ್ರ್ಯ ಬಂದು 75 ವರ್ಷಗಳ ಸಂಭ್ರಮದ ಕಾಲದಲ್ಲಿದ್ದೇವೆ. 25-50 ವರ್ಷ ಆದಾಗ ಯಾರೂ ಸಂಭ್ರಮಿಸಲೇ ಇಲ್ಲ. ಈಗ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ವನ್ನು ದೇಶಾದ್ಯಂತ ಆಚರಿಸಲು ಕರೆ ನೀಡಿದ್ದಾ ರೆ. ಎಲ್ಲರೂ ವಿಶೇಷವಾಗಿ ಆಚರಿಸೋಣ ಎಂದು ಕಂದಾಯ ಸಚಿವ ಆರ್.ಅಶೋಕ್ ಕರೆ ನೀಡಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ಕೆಂಪೇಗೌಡ ಜಯಂತ್ಯುತ್ಸವ ಉದ್ಘಾಟನೆ ಮಾಡಿ ಮಾತನಾಡಿ, ನಾನು ಮಂಡ್ಯ ಉಸ್ತುವಾರಿ ಸಚಿವನಾಗಿದ್ದಾಗ ಇಲ್ಲೇ ಬಂದು ಕಬ್ಬಿಗೆ ಬೆಲೆ ನಿಗದಿ ಮಾಡುತ್ತಿದ್ದೆ . ನಮ್ಮ ಕಾಲದಲ್ಲೇ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಿತ್ತು. ಈಗ ಸುಮಾರು 300 ಕೋಟಿ ಹಣ ನೀಡಿದ್ದೇವೆ. ನಿಮ್ಮ ಜೊತೆ ಬಿಜೆಪಿ ಸದಾ ನಿಲ್ಲುತ್ತದೆ ಎಂದು ಹೇಳಿದರು.
ಯಾವ ಅಧಿಕಾರ ಇಲ್ಲದೆ ಸಚ್ಚಿದಾನಂದ ಇಷ್ಟೊಂದು ಸಾಮಾಜಿಕ ಕಾರ್ಯ ಮಾಡಿದ್ದಾರೆ. ಅವರನ್ನು ಬೆಳೆಸೋಣ. ನಿಮ್ಮ ಭಾಗಕ್ಕೆ ಒಳ್ಳೆಯ ಕೆಲಸ ಖಂಡಿತ ಮಾಡುತ್ತಾರೆ. ಈಗಾಗಲೇ ಒಕ್ಕಲಿಗರ ಸಮುದಾಯ ಭವನಕ್ಕೆ ಜಾಗ ಕೇಳಿದ್ದಾರೆ. ಸ್ಥಳ ಕೊಡುವ ಜವಾಬ್ದಾರಿ ನನ್ನದು. ಅಲ್ಲದೇ 50 ಲಕ್ಷ ಹಣವನ್ನೂ ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ಕೊಡಿಸುತ್ತೇನೆ ಎಂದು ಅಶೋಕ ಹೇಳಿದರು.
ಕಟ್ಟಡ ಉದ್ಘಾಟನೆ: ಮಂಡ್ಯ ಜಿಲ್ಲೆ ಮದ್ದೂರಿನ ಭಾರತೀನಗರದಲ್ಲಿ ನಾಡಕಚೇರಿಯ ನೂತನ ಕಟ್ಟಡವನ್ನು ಆರ್.ಅಶೋಕ ಉದ್ಘಾಟನೆ ಮಾಡಿದರು. ಸ್ವಾತಂತ್ರ್ಯದ ಸುವರ್ಣಮಹೋತ್ಸವದ ಅಂಗವಾಗಿ ಆರ್. ಅಶೋಕ್ ಅವರು ಮದ್ದೂರಿನಲ್ಲಿ ಸಚಿವ ಗೋಪಾಲಯ್ಯ ಅವರೊಂದಿಗೆ ಎತ್ತಿನ ಗಾಡಿ ಜಾಥಾ ನಡೆಸಿದರು.
ನಂತರ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಅವರ ಮನೆಗೆ ತೆರಳಿ ಸಚಿವರು ಸನ್ಮಾನ ಮಾಡಿ, ಆರೋಗ್ಯ ವಿಚಾರಿಸಿದರು. ಹೋರಾಟ ನೆನಪುಗಳನ್ನು ಅವರಿಂದ ಕೇಳಿ ತಿಳಿದರು.