Advertisement

ನೈಸರ್ಗಿಕ ಬಣ್ಣಗಳಿಂದ ಹೋಳಿ ಆಚರಿಸಿ

01:13 PM Mar 13, 2022 | Team Udayavani |

ರಬಕವಿ-ಬನಹಟ್ಟಿ: ಮಾ. 17 ಮತ್ತು 18ರಂದು ನಡೆಯುವ ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸಿ. ಹೋಳಿ ಸಂದರ್ಭದಲ್ಲಿ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಿ. ಇದರಿಂದ ಯಾವುದೆ ತೊಂದರೆ ಇಲ್ಲ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್‌ ಎಸ್‌.ಬಿ.ಇಂಗಳೆ ಹೇಳಿದರು.

Advertisement

ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಇನ್ನೊಬ್ಬರಿಗೆ ತೊಂದರೆಯಾಗದಂತೆ ಹೋಳಿ ಆಚರಿಸಿ. ಡಾಂಬರೀಕರಣದ ರಸ್ತೆಗಳ ಮೇಲೆ ಕಾಮ ದಹನ ಬೇಡ. ಡಾಂಬರೀಕರಣದ ರಸ್ತೆಗಳ ಮೇಲೆ ಕಾಮ ದಹನ ಮಾಡಿದರೆ ರಸ್ತೆಗಳಲ್ಲಿ ತೆಗ್ಗು ನಿರ್ಮಾಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶಾಂತಿಯಿಂದ ಹಬ್ಬ ಆಚರಿಸಬೇಕು ಎಂದರು. ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಯಾವುದೆ ರೀತಿಯ ಸಾರ್ವಜನಿಕ ಅಸ್ತಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಿ. ಬಣ್ಣದ ನಂತರ ಜನರು ನದಿ, ಕೆರೆಗಳಲ್ಲಿ ಬಣ್ಣ ತೊಳೆದುಕೊಳ್ಳಬಾರದು. ಇದರಿಂದ ನೀರು ಕಲುಷಿತಗೊಳ್ಳುತ್ತದೆ. ರಾಸಾಯನಿಕ ಬಣ್ಣಗಳು ಬೇಡ ಎಂದರು.

ಜಮಖಂಡಿ ಡಿವೈಎಸ್ಪಿ ಮಾತನಾಡಿ, ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗದಂತೆ ಮತ್ತು ಸಂಪ್ರದಾಯದಂತೆ ಹಬ್ಬಗಳನ್ನು ಆಚರಿಸಿ ಎಂದರು. ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ಶ್ರೀಶೈಲ ಧಬಾಡಿ, ಮಹಾಶಾಂತ ಶೆಟ್ಟಿ, ಶಂಕರ ಸೋರಗಾವಿ, ಶಿವಾನಂದ ಗಾಯಕವಾಡ, ಅಂಜುಮನ್‌ ಎ ಇಸ್ಲಾಂ ಸಮಿತಿ ಹಾರೂನ್‌ ಸಾಂಗ್ಲಿಕರ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next