ಹುಣಸಗಿ: ಗೌರಿಗಣೇಶ ಹಬ್ಬವನ್ನು ಶಾಂತಿ ಯುತ ಹಾಗೂ ಸೌಹಾರ್ದತೆ ಯೊಂದಿಗೆ ಆಚರಿಸಬೇಕೆಂದು ತಹಶೀಲ್ದಾರ್ ಜಗದೀಶ ಚೌರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗೌರಿಗಣೇಶ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಘ-ಸಂಸ್ಥೆ ಹಾಗೂ ವಿನಾಯಕ ಮಂಡಳಿಯವರು ನೋಡಿಕೊಳ್ಳಬೇಕು. ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿದಾಗ ಪರಿಸರ ಹಾನಿ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಡಿವೈಎಸ್‌ಪಿ ಮಂಜುನಾಥ ಟಿ. ಮಾತನಾಡಿ, ಹುಣಸಗಿ ವೃತ್ತ ವ್ಯಾಪ್ತಿಯ ಹುಣಸಗಿ, ಕೊಡೇಕಲ್, ನಾರಾಯಣಪುರ, ಕೆಂಭಾವಿ ವೃತ್ತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರು ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಧ್ವನಿ ವರ್ಧಕ ಹಾಗೂ ಡಿಜೆಗಳಿಗೆ ಅವಕಾಶ ಇಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರಿಗೆ ಧ್ವನಿವರ್ಧಕ ಬಳಸಬಾರದು ಒಂದು ವೇಳೆ ನಿಯಮ ಮೀರಿ ನಡೆದಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಳ್ಳಬೇಕು. ಅಂದಾಗ ಮಾತ್ರ ಪೊಲೀಸ್ ಬಂದೋಬಸ್ತ್ ವಹಿಸಲಾಗುವುದು. ವಿದ್ಯುತ್ ಇಲಾಖೆ ಪರವಾನಗಿ ಅಗತ್ಯವಾಗಿದೆ. ಡಿಜೆ ಸೌಂಡ್ ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭ ಸಿಪಿಐ ಎಂ.ಬಿ. ಚಿಕ್ಕಣನವರ, ಪಿಎಸ್‌ಐ ಚಿದಾನಂದ ಸೌದಿ, ಶ್ರೀಶೈಲ್ ಅಂಬಾಟೆ, ದೇವೇಂದ್ರ ರೆಡ್ಡಿ, ಹನುಮಂತ ಬಂಕಲಗಿ, ಹುಣಸಗಿ ಪಪಂ ಮುಖ್ಯಾಧಿಕಾರಿ ಪ್ರಕಾಶ ಬಾಗಲಿ, ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ಮಲ್ಲಿನಕಾರ್ಜುನ ರಾಮಸಮುದ್ರ ಹಾಗೂ ಮುಖಂಡರಾದ ವೀರೇಶ ಚಿಂಚೋಳಿ, ಜಿಪಂ ಮಾಜಿ ಸದಸ್ಯ ಬಸವರಾಜ ಸ್ಥಾವರಮಠ, ಬಸಣ್ಣ ದೇಸಾಯಿ, ಸುಭಾನ ಅಲಿ ಡೆಕ್ಕನ್, ಎಂ.ಎಸ್. ಚಂದಾ, ಸುರೇಶ ದೊರಿ, ಅಮೀದ್ ಡೆಕ್ಕನ್, ಹೊನ್ನಪ್ಪ ದೇಸಾಯಿ, ತಿಪ್ಪಣ್ಣ ಸಾಹು ಚಂದಾ, ಬಿ.ಎಲ್. ಹಿರೇಮಠ, ವಿ.ಎಸ್. ಹಾವೇರಿ, ರಮೇಶ ಬಿರಾದಾರ, ಆನಂದ ಬಾರಿಗಿಡದ, ಬಸವರಾಜ ವೈಲಿ ಸೇರಿದಂತೆ ಅನೇಕ ಮುಖಂಡರಿದ್ದರು.