Advertisement

ಶಾಂತತೆಯಿಂದ ಹಬ್ಬ ಆಚರಿಸಿ

03:59 PM Aug 22, 2020 | Suhan S |

ಭಟ್ಕಳ: ಸಹಾಯಕ ಕಮಿಷನರ್‌ ಭರತ್‌ ಎಸ್‌. ಅಧ್ಯಕ್ಷತೆಯಲ್ಲಿ ಸಹಾಯಕ ಕಮಿಷನರ್‌ ಕಚೇರಿಯಲ್ಲಿ ಗಣೇಶ ಚತುರ್ಥಿ ಅಂಗವಾಗಿ ಶಾಂತಿ ಪಾಲನಾ ಸಮಿತಿ ಸಭೆ ನಡೆಯಿತು.

Advertisement

ಅವರು ಮಾತನಾಡಿ, ಕೋವಿಡ್‌ -19 ಮಹಾಮಾರಿ ತೊಂದರೆ ಇದ್ದರೂ ನಾವು ಈಗಾಗಲೇ ಎರಡು ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ, ಸೌಹಾರ್ದಯುತವಾಗಿ ಆಚರಿಸಿದ್ದೇವೆ. ಮುಂದೆ ಬರುವ ಗಣೇಶ ಚತುರ್ಥಿ ಹಬ್ಬವನ್ನು ಕೂಡಾ ಅತ್ಯಂತ ಶಾಂತ ರೀತಿಯಿಂದ ಆಚರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಸಕರಾರದ ನಿರ್ದೇಶನದಂತೆ ಎಲ್ಲ ಕಡೆಗಳಲ್ಲಿಯೂ ಹಬ್ಬವನ್ನು ಆಚರಿಸಬೇಕು. ಯಾವುದೇ ರೀತಿಯ ತೊಂದರೆ ಇದ್ದರೆ ಅಧಿಕಾರಿಗಳನ್ನು ತಕ್ಷಣ ಸಂರ್ಪಕಿಸಿ ಮಾಹಿತಿ ನೀಡುವಂತೆ ಕೋರಿದರು.

ಎಎಸ್‌ಪಿ ನಿಖೀಲ್‌ ಬಿ. ಮಾತನಾಡಿ, ಗಣೇಶ ಹಬ್ಬವನ್ನು ಎಲ್ಲರೂ ಜೊತೆಗೇ ಆಚರಿಸಿ ಮಾದರಿಯಾಗೋಣ ಎಂದು ಕರೆ ನೀಡಿದರು. ಪೊಲೀಸ್‌ ಇಲಾಖೆ ಸದಾ ನಿಮ್ಮೊಂದಿಗೆ ಇದೆ, ಯಾವುದೇ ತೊಂದರೆ ಸಂಭವಿಸಬಹುದಾದ ಸಂಶಯವಿದ್ದರೂ ಸಹ ನಮಗೆ ದೂರವಾಣಿ ಮಾಡಿ ತಿಳಿಸಿ ಎಲ್ಲಾ ರೀತಿಯ ಬಂದೋಬಸ್ತ್ ಒದಗಿಸಲು ನಾವು ತಯಾರಿದ್ದು ಜನರು ಯವುದೇ ಭಯವಿಲ್ಲದೇ ಶಾಂತ ರೀತಿಯಿಂದ ಹಬ್ಬದ ಆಚರಣೆ ಮಾಡುವಂತೆ ಕರೆ ನೀಡಿದರು.

ಇಷ್ಟು ವರ್ಷ ಗಣಪತಿ ಪೂಜೆಯನ್ನು 3, 5, 9 ದಿನ ಮಾಡುತ್ತಿದ್ದರೆ, ಈ ವರ್ಷ ಮಾತ್ರ ಸರಕಾರ ಎರಡು ದಿನಗಳ ಕಾಲ ಪರವಾನಗಿ ನೀಡಿದೆ. ಅಷ್ಟರಲ್ಲಿಯೇ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ಸಹಕರಿಸುವಂತೆಯೂ ಗಣೇಶೋತ್ಸವ ಸಮಿತಿಗಳಿಗೆ ಕೋರಿದರು. ತಹಶೀಲ್ದಾರ್‌ ಎಸ್‌. ರವಿಚಂದ್ರ ಪ್ರಾಸ್ತಾವಿಕ ಮಾತನಾಡಿದರು. ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್‌. ನಾಯ್ಕ, ಪ್ರಮುಖರಾದ ಶ್ರೀಧರ ನಾಯ್ಕ ಆಸರಕೇರಿ, ಶಾಂತಾರಾಮ ಭಟ್ಕಳ, ಶಂಕರ ಶೆಟ್ಟಿ, ತಂಜೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಇರ್ಷಾದ್‌, ಮುನೀರ್‌, ಅಝೀಜು ರ್ರೆಹಮಾನ್‌, ಪುರಸಭಾ ಸದಸ್ಯ ಫಯ್ನಾಜ್‌ ಮುಲ್ಲಾ, ಮುಂತಾದವರು ಉಪಸ್ಥಿತರಿದ್ದರು. ಸಿಪಿಐ ದೇವರಾಜ ಪಿ.ಎಂ. ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next