Advertisement
ಮಹಾನ್ ಕ್ರೀಡಾಕೂಟದ ವೇಳೆ ಇಂಡೋನೇಶ್ಯವು ಭಯೋತ್ಪಾದನೆ, ಬೀದಿ ಕಾಳಗ ಮತ್ತು ಜಕಾರ್ತದ ನಟೋರಿಯಸ್ ಟ್ರಾಫಿಕ್ ಸಮಸ್ಯೆಯನ್ನು ಮರೆಯಬೇಕಾಗಿದೆ. ವಿಯೆಟ್ನಾಂ ಆತಿಥ್ಯದಿಂದ ಹಿಂದೆ ಸರಿದ ಬಳಿಕ ಇಂಡೋನೇಶ್ಯ ಅತ್ಯಲ್ಪ ಅವಧಿಯಲ್ಲಿ ಕೂಟದ ಆತಿಥ್ಯ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿತ್ತು. ಕೂಟವನ್ನು ಯಶಸ್ವಿಯಾಗಿ ಸಂಘಟಿಸಲು ನಾವು ಸಿದ್ಧರಿದ್ದೇವೆ. ಸಿದ್ಧತೆಯ ಬಗ್ಗೆ ನಮಗೇನೂ ಸಮಸ್ಯೆಯಿಲ್ಲ. ಒಂದು ವೇಳೆ ಸಮಸ್ಯೆ ಉದ್ಭವಿಸಿದರೂ ಅದನ್ನು ತತ್‌ಕ್ಷಣವೇ ಪರಿಹರಿಸಲಿದ್ದೇವೆ ಎಂದು ಮುಖ್ಯ ಸಂಘಟಕ ಎರಿಕ್ ತೋಹಿರ್ ಹೇಳಿದ್ದಾರೆ.
ಟ್ರಾಫಿಕ್ ಜಾಮ್ ಆಗದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮ-ಬೆಸ ಸಂಖ್ಯೆಯ ವಾಹನಗಳನ್ನು ಓಡಿಸುವ ನಿಯಮವನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಕೂಟದ ವೇಳೆ ಆ್ಯತ್ಲೀಟ್ಸ್ ಮತ್ತು ಅಧಿಕಾರಿಗಳಿಗೆ ಪ್ರತ್ಯೇಕ ಲೇನ್‌ನಲ್ಲಿ ಸಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ವೇಳೆ ಶಾಲಾ ಕಾಲೇಜ್‌ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಶಾಲಾ ಮಕ್ಕಳ ವಾಹನ ರಸ್ತೆಗೆ ಇಳಿಯುವುದಿಲ್ಲ.
Related Articles
Advertisement