Advertisement

ಸರ್ಜಿಕಲ್ ದಾಳಿ ಬಳಿಕ ಪಾಕ್ ನಿಂದ ಗುಂಡಿನ ದಾಳಿ ಕಡಿಮೆಯಾಗಿದೆ; ಕೇಂದ್ರ

07:07 PM Mar 22, 2017 | Team Udayavani |

ನವದೆಹಲಿ:ಭಾರತದ ಯೋಧರು ದಿಢೀರ್ ಆಗಿ ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ನಡೆಸಿದ ಬಳಿಕ ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪದೇ, ಪದೇ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಯ ಪ್ರಮಾಣ ಕಡಿಮೆಯಾಗಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

Advertisement

ಸರ್ಜಿಕಲ್ ದಾಳಿಯ ನಂತರ ಪಾಕಿಸ್ತಾನ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿ ತುಂಬಾ ಕಡಿಮೆಯಾಗಿದೆ. 2016ರಲ್ಲಿ ಗಡಿನಿಯಂತ್ರಣ ರೇಖೆ ಬಳಿ 228 ಬಾರಿ ಗುಂಡಿನ ದಾಳಿ ನಡೆದಿದ್ದರೆ, ಅಂತಾರಾಷ್ಟ್ರೀಯ ಗಡಿಯಲ್ಲಿ 221 ಗುಂಡಿನ ದಾಳಿ ನಡೆದಿದೆ.

2017ರ ಫೆಬ್ರುವರಿವರೆಗೆ 22 ಗುಂಡಿನ ದಾಳಿ ಎಲ್ಒಸಿಯಲ್ಲಿ ನಡೆದಿದ್ದರೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಕೇವಲ 6 ದಾಳಿ ನಡೆದಿದೆ ಎಂದು ಗೃಹ ವ್ಯವಹಾರ ರಾಜ್ಯ ಖಾತೆ ಸಚಿವ ಹನ್ಸ್ ರಾಜ್ ಗಂಗಾರಾವ್ ಅಹಿರ್ ರಾಜ್ಯಸಭೆಯಲ್ಲಿ ಈ ಉತ್ತರ ನೀಡಿದ್ದಾರೆ.

2017ರಲ್ಲಿ ಗಡಿನಿಯಂತ್ರಣ ರೇಖೆಯಲ್ಲಾಗಲಿ, ಅಂತಾರಾಷ್ಟ್ರೀಯ ಗಡಿಯಲ್ಲಾಗಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. 2016ರಲ್ಲಿ ಗಡಿನಿಯಂತ್ರಣ ರೇಖೆಯಲ್ಲಿ 13 ನಾಗರಿಕರು ಸಾವನ್ನಪ್ಪಿದ್ದು, 83 ಜನರು ಗಾಯಗೊಂಡಿದ್ದರು. ಅಂತಾರಾಷ್ಟ್ರೀಯ ಗಡಿಯಲ್ಲಿ 8 ಸಾವು ಸಂಭವಿಸಿದ್ದರು, 74 ಜನರು ಗಾಯಗೊಂಡಿದ್ದರು. ಐದು ಮಂದಿ ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next