ನವದೆಹಲಿ: ಕಳೆದ ಡಿ.28ರಂದು ತಮಿಳುನಾಡಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಹಾಗೂ ಇತರೆ 13 ಮಂದಿಯ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದ ಪ್ರಾಥಮಿಕ ತನಿಖೆಯ ವರದಿಯನ್ನು ಶುಕ್ರವಾರ ಸಲ್ಲಿಸಲಾಗಿದೆ.
“ಕಾಪ್ಟರ್‌ನಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ, ಇದು ನಿರ್ಲಕ್ಷ್ಯದಿಂದಾದ ಅವಘಡವೂ ಅಲ್ಲ, ವಿಧ್ವಂಸಕ ಕೃತ್ಯವೂ ಅಲ್ಲ. ಅನಿರೀಕ್ಷಿತವಾಗಿ ಎದುರಾದ ಪ್ರತಿಕೂಲ ಹವಾಮಾನದಿಂದಾಗಿಯೇ ಈ ದುರಂತ ಸಂಭವಿಸಿತು’ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:75 ಲಕ್ಷ ಮಂದಿಯಿಂದ ಸೂರ್ಯ ನಮಸ್ಕಾರ
ಸೇನೆಯ ಮೂರೂ ಪಡೆಗಳು ಕೋರ್ಟ್ ಆಫ್ ಎಂಕ್ವೆರಿ ನಡೆಸಿ ಈ ಅಧಿಕೃತ ವರದಿಯನ್ನು ನೀಡಿದೆ. ಹೆಲಿಕಾಪ್ಟರ್‌ನ ಡೇಟಾ ರೆಕಾರ್ಡರ್, ಕಾಕ್‌ಪಿಟ್ ವಾಯ್ಸ ರೆಕಾರ್ಡರ್, ಎಲ್ಲ ಲಭ್ಯ ಸಾಕ್ಷ್ಯಗಳನ್ನು ವಿಶ್ಲೇಷಿಸಿ ಈ ವರದಿ ಸಲ್ಲಿಸಲಾಗಿದೆ.