Advertisement

ಏಕಕಾಲದಲ್ಲಿ ಎರಡು ಪರೀಕ್ಷೆ;ಕರಾವಳಿಯ ಪದವಿ ವಿದ್ಯಾರ್ಥಿಗಳ ಸಿಡಿಎಸ್‌ ಹುಮ್ಮಸ್ಸಿಗೆ ತಣ್ಣೀರು!

02:11 AM Mar 26, 2022 | Team Udayavani |

ಕಾರ್ಕಳ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ)ದ ಕಂಬೈನ್ಸ್‌ ಡಿಫೆನ್ಸ್‌ ಸರ್ವಿಸ್‌ (ಸಿಡಿಎಸ್‌) ಪರೀಕ್ಷೆ ಬರೆಯುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅದೇ ಸಮಯದಲ್ಲಿ ವಿ.ವಿ. ಪದವಿ ಪರೀಕ್ಷೆ ನಿಗದಿ ಆಗಿರುವುದರಿಂದ ತೊಂದರೆ  ಉಂಟಾಗಿದೆ.

Advertisement

ಯುಪಿಎಸ್‌ಸಿಯು ಸರಕಾರದಿಂದ ಮಾನ್ಯತೆ ಪಡೆದ ವಿ.ವಿ.ಗಳ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಸಿಡಿಎಸ್‌ ಪರೀಕ್ಷೆ ಬರೆಯಲು ಅರ್ಜಿ ಆಹ್ವಾನಿಸಿತ್ತು. ಎ. 10ರಂದು ದೇಶವ್ಯಾಪಿ ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಆದರೆ ಮಂಗಳೂರು ವಿ.ವಿ.ಯ ಪದವಿ ಪರೀಕ್ಷೆಗಳು ಅದೇ ಸಮಯಕ್ಕೆ ನಿಗದಿಯಾಗಿರುವುದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮಂಗಳೂರು ವಿ.ವಿ.ಯ ಪದವಿ ಪರೀಕ್ಷೆಗಳು ಎ. 6ರಿಂದ ಮೇ 4ರ ವರೆಗೆ ನಡೆಯಲಿವೆ. ಎ. 10ರಂದು ಸಿಡಿಎಸ್‌ ಪರೀಕ್ಷೆ ಇದೆ. ಅನಿವಾರ್ಯವಾಗಿ ಸಿಡಿಎಸ್‌ ಪರೀಕ್ಷೆಗೆ ಗೈರುಹಾಜರಾಗಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡಿದ್ದು, ಈ ಬಗ್ಗೆ ಕಾಲೇಜು ಮುಖ್ಯಸ್ಥರ ಗಮನಕ್ಕೂ ತಂದಿದ್ದಾರೆ.

ಪದವಿ ಪರೀಕ್ಷೆಯ ವೇಳಾಪಟ್ಟಿ ವಿ.ವಿ. ಮಟ್ಟದಲ್ಲೇ ನಿಗದಿಯಾಗುತ್ತದೆ. ರಾಜ್ಯದ ಇತರ ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ ಇಂತಹ ತೊಂದರೆ ಉದ್ಭವಿಸಿಲ್ಲ. ನಮಗೂ ಸಿಡಿಎಸ್‌ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕು. ಪದವಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಸಹಕರಿಸಬೇಕು ಎಂದು ಮಂಗಳೂರು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಏಳು ವರ್ಷದ ಬಾಲಕನಿಗೆ ಚಿತ್ರಹಿಂಸೆ: ಓರ್ವನ ಬಂಧನ: ಗೃಹ ಸಚಿವ

Advertisement

ಹೆತ್ತವರ ಅಸಮಾಧಾನ
ಶಿಕ್ಷಣದಲ್ಲಿ ಮುಂದಿರುವ ಕರಾವಳಿಯ ಯುವಜನತೆ ರಕ್ಷಣ ಸೇವೆ, ಆಡಳಿತಾತ್ಮಕ ಸೇವೆಗಳಲ್ಲಿ ಉನ್ನತ ಹುದ್ದೆ ಪಡೆಯುವ ಅವಕಾಶದಿಂದ ವಂಚಿತರಾಗುತ್ತ ಬಂದಿ ದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರಯತ್ನ, ಪ್ರೋತ್ಸಾಹ ಹೆಚ್ಚುತ್ತಿದೆ. ಆದರೆ ಈ ಬಾರಿ ಸಿಡಿಎಸ್‌ ಪರೀಕ್ಷೆ ಬರೆಯಲು ಅಡ್ಡಿ ಎದು ರಾಗಿರುವ ಬಗ್ಗೆ ವಿದ್ಯಾರ್ಥಿಗಳು, ಪೋಷಕ ರಲ್ಲಿ ಅಸಮಾಧಾನ ಕಂಡುಬಂದಿದೆ.

ರಕ್ಷಣ ಸೇವೆಯಲ್ಲಿ ಅವಕಾಶ ಪಡೆಯಲು ಸಿಡಿಎಸ್‌ ಪರೀಕ್ಷೆ ಬರೆಯುವುದು ಅಗತ್ಯ. ಎ. 10ರಂದು ಸಿಡಿಎಸ್‌ ಪರೀಕ್ಷೆ ಇರುವುದು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಇದುವರೆಗೆ ಬಂದಿರಲಿಲ್ಲ. ರಿಜಿಸ್ಟ್ರಾರ್‌ ಗಮನಕ್ಕೆ ತಂದು ಪದವಿ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಮಾಡಲು ಅವಕಾಶವಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವೆ.
– ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ
ಕುಲಪತಿಗಳು ಮಂಗಳೂರು ವಿ.ವಿ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next