Advertisement
ಪಟ್ಟಣದೆಲ್ಲಡೆ ಅಳವಡಿಸಿದ್ದ ರಾಜಕೀಯ ನಾಯಕರ ಬ್ಯಾನರ್, ವಿವಿಧ ಮನರಂಜನಾ ಕಾರ್ಯಕ್ರಮ,ಧ್ವನಿವರ್ಧಕದ ಶಬ್ಧಕ್ಕೆ ಯುವಕರು ಹೆಜ್ಜೆ ಹಾಕಿದರು. ಪದ್ಧತಿಯಂತೆ ರಾತ್ರಿ 8 ಗಂಟೆಗೆ ಒಕ್ಕಲಗೇರಿಯಿಂದ ಆರಂಭವಾದ ಘಟ್ಟದ ಮೆರವಣಿಗೆಯಲ್ಲಿ ನೂರಾರುಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಪಟ್ಟಲದಮ್ಮನದೇವಸ್ಥಾನದತ್ತ ತೆರಳಿದರು. ನಂತರ ಸಿದ್ಧಾರ್ಥನಗರ, ಕೀರ್ತಿನಗರ, ಗಂಗಾಮತಸ್ಥರ ಬೀದಿ, ಅಶೋಕ್ ನಗರ,ಬಸವಲಿಂಗಪ್ಪನಗರದ ಮಹಿಳೆಯರು ಮೆರವಣಿಗೆಮೂಲಕ ಘಟ್ಟದೊಂದಿಗೆ ತೆರಳಿ ಪಟ್ಟಲದಮ್ಮನಿಗೆ ಪೂಜೆ ಸಲ್ಲಿಸಿದರು.
Related Articles
Advertisement
ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿಹಾಗೂ ಡಿವೈಎಸ್ಪಿ ಎನ್.ನವೀನ್‌ಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ರಾತ್ರಿಯ ಘಟ್ಟದ ಮೆರವಣಿಗೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.
ಶನಿವಾರ ಬೆಳಗ್ಗೆ ಪಟ್ಟಲದಮ್ಮ, ಚಿಕ್ಕಮ್ಮತಾಯಿ,ದೊಡ್ಡಮ್ಮತಾಯಿ, ಒಳಗೆರೆ ಹುಚ್ಚಮ್ಮ ದೇವಸ್ಥಾನಗಳಿಗೆಶಾಸಕ ಡಾ.ಕೆ.ಅನ್ನದಾನಿ, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂನರೇಂದ್ರಸ್ವಾಮಿ, ಬಿಜೆಪಿ ಮುಖಂಡ ಜಿ.ಮುನಿರಾಜು,ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್, ಮಾಜಿ ಅಧ್ಯಕ್ಷರಾದ ದೊಡ್ಡಯ್ಯ,ಎಂ.ಎಚ್.ಕೆಂಪಯ್ಯ, ಚಿಕ್ಕರಾಜು, ನಂಜುಂಡಯ್ಯ, ಪ್ರಭಾರತಹಶೀಲ್ದಾರ್ ಕುಮಾರ್, ಪುರಸಭೆ ಮುಖ್ಯಾ ಧಿಕಾರಿ ಪಿ.ಹರಿಪ್ರಸಾದ್ ಮತ್ತಿತರರು ದೇವರ ದರ್ಶನ ಪಡೆದರು.
ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾದ ಸಿಡಿಹಬ್ಬ : ವಿಧಾನಸಭಾ ಚುನಾವಣೆಗೆ 3 ತಿಂಗಳು ಇರುವುದರಿಂದ ಈ ಬಾರಿಯ ಸಿಡಿಹಬ್ಬರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು.ಒಕ್ಕಗೇರಿಯಿಂದ ಆರಂಭವಾದ ಘಟ್ಟ ಮೆರವಣಿಗೆಪಟ್ಟಣದ ಅನಂತ್ ರಾಂ ವೃತ್ತದ ಬಳಿ ಶುಕ್ರವಾರರಾತ್ರಿ ಬಂದಾಗ ಸಂಪ್ರದಾಯಕ ಎದುರಾಳಿಗಳಾದಶಾಸಕ ಡಾ.ಕೆ.ಅನ್ನದಾನಿ ಹಾಗೂ ಕೆಪಿಸಿಸಿ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸುವ ವೇಳೆಬೆಂಬಲಿಗರು ಪರಸ್ಪರ ಜೈಕಾರ ಕೂಗಿ ತಮ್ಮ ನಾಯಕರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಸಿದ್ದಾರ್ಥನಗರದಲ್ಲಿ ಘಟ್ಟಕ್ಕೆಪೂಜೆ ಸಲ್ಲಿಸುವ ವೇಳೆ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಡಾ.ಕೆ.ಅನ್ನದಾನಿ ಸಮ್ಮುಖದಲ್ಲಿ ಕಾಂಗ್ರೆಸ್‌ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟನೂಕಾಟ ನಡೆಯಿತು. ಕೂಡಲೇ ಎಚ್ಚೆತ್ತ ಪೊಲೀಸರು ಘಟನೆ ತಿಳಿಗೊಳಿಸಿದರು.