Advertisement
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಡಿ.ಕೆ.ಶಿ. ಆಗಮಿಸುತ್ತಿದ್ದಂತೆ ಪ್ರವೇಶ ದ್ವಾರದ ಬಳಿ ಸೇರಿದ್ದ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿ ಅವರಿಗೆ ರವಿವಾರ ಮೂರನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜಾರಕಿಹೊಳಿ ನಿವಾಸಕ್ಕೆ ರವಿವಾರ ರಾತ್ರಿ ಆಗಮಿಸಿದ ಪೊಲೀಸರು ಸೋಮವಾರ ಬೆಳಗ್ಗೆ 10ಕ್ಕೆ ಆಡುಗೋಡಿಯ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
Related Articles
ಜಾರಕಿಹೊಳಿ ಅವರನ್ನು ಬಂಧಿಸುವ ಬದಲಿಗೆ ಸರಕಾರ, ಪೊಲೀಸ್ ಇಲಾಖೆ ರಕ್ಷಣೆಗೆ ನಿಂತಿದೆ. ಕೂಡಲೇ ಅವರನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ಈ ನಡುವೆ ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಕಡೆಯಿಂದ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
Advertisement
ಇಂದು ಯುವತಿ ಹಾಜರುಪ್ರಕರಣದ ಕೇಂದ್ರಬಿಂದು ಯುವತಿ ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುತ್ತಾರೆ ಎಂದು ಆಕೆಯ ಪರ ವಕೀಲ ಕೆ.ಎನ್.ಜಗದೀಶ್ ಹೇಳಿದ್ದಾರೆ. ರವಿವಾರ ಫೇಸ್‌ಬುಕ್ ಲೈವ್ ಆಗಿ ಈ ವಿಚಾರ ತಿಳಿಸಿರುವ ಅವರು, ಸಿಆರ್‌ಪಿಸಿ ಸೆಕ್ಷನ್ 164 ಪ್ರಕಾರ ಯುವತಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ನೀಡಲು ಅವಕಾಶ ಇದೆ ಎಂದಿದ್ದಾರೆ.