Advertisement

ರಾಮನಗರದ ಗ್ರಾನೈಟ್‌ ಉದ್ಯಮಿ ಮನೆ ಮೇಲೆ ದಾಳಿ

12:42 AM Mar 21, 2021 | Team Udayavani |

ಬೆಂಗಳೂರು:  ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಆರೋಪಿಗಳ ಜತೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾದ ರಾಮನಗರದ ಕನಕಪುರ ಮೂಲದ ಗ್ರ್ಯಾನೈಟ್‌ ಉದ್ಯಮಿಯ ಜೆ.ಪಿ.ನಗರದಲ್ಲಿರುವ ಮನೆ ಮೇಲೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಾಳಿ ನಡೆಸಿದ್ದು, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

Advertisement

ಪ್ರಕರಣದ ಕಿಂಗ್‌ಪಿನ್‌ ಪತ್ರಕರ್ತ ನರೇಶ್‌ ಗೌಡ, ಶ್ರವಣ್‌ ಹಾಗೂ ಇತರ ಆರೋಪಿಗಳಿಗೆ ಉದ್ಯಮಿ ಆರ್ಥಿಕ ನೆರವು ನೀಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ  ದಾಳಿ ನಡೆದಿದ್ದು, ಸುಮಾರು ಮೂರು ಗಂಟೆಗೂ ಅಧಿಕ ಕಾಲ ಶೋಧ ನಡೆಸಿದೆ.

ಉದ್ಯಮಿಯು 4 ತಿಂಗಳುಗಳಿಂದ  ನರೇಶ್‌ ಗೌಡ ಹಾಗೂ ಇತರರ ಜತೆ ನಿರಂತರ ಸಂಪರ್ಕದಲ್ಲಿದ್ದು, ಸಿ.ಡಿ.ಯಲ್ಲಿರುವ ಯುವತಿಗೂ ಈತನಿಂದ ಹಣ ಸಂದಾ ಯವಾಗಿದೆ ಎಂಬ ಬಗ್ಗೆ ಎಸ್‌ಐಟಿಗೆ ಸುಳಿವು ಸಿಕ್ಕಿದೆ.

 ಉದ್ಯಮಿ ಕೇರಳದಲ್ಲಿ  :

ಎಸ್‌ಐಟಿಗೆ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಉದ್ಯಮಿಯ ಮೊಬೈಲ್‌ ಮಾ.10ರಂದು ಕೇರಳದ ಎರ್ನಾಕುಲಂನಲ್ಲಿ  ಸ್ವಿಚ್‌ ಆಫ್ ಆಗಿದೆ. ಎಸ್‌ಐಟಿ ತಂಡ ಕೊಚ್ಚಿಗೆ ತೆರಳಿ ಈ ಉದ್ಯಮಿಗಾಗಿ ಶೋಧ ನಡೆಸುತ್ತಿದೆ. ಈಗ ಆತ  ಅಲ್ಲಿಂದಲೂ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Advertisement

ಓರ್ವನಿಂದ ನಿರೀಕ್ಷಣ ಜಾಮೀನು ಅರ್ಜಿ :

ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿಗೆ ಸಿ.ಡಿ. ತಲುಪಿಸಿದ್ದಾನೆ ಎಂದು ಹೇಳಲಾದ ಪತ್ರಕರ್ತ ಲಖ‍ಕ್ಷ್ಮೀಪತಿ ನಿರೀಕ್ಷಣ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಮುಂದುವರಿದ ಶೋಧ :

ನರೇಶ್‌,  ಶ್ರವಣ್‌ ಹಾಗೂ ಯುವತಿಗಾಗಿ ಎಸ್‌ಐಟಿ  ಶೋಧ  ಮುಂದುವರಿದಿದೆ. ಆರೋಪಿಗಳು   ನಗದು ರೂಪದಲ್ಲೇ ವ್ಯವಹಾರ ನಡೆಸುತ್ತಿರುವ ಸುಳಿವು ಸಿಕ್ಕಿದ್ದು, ಪತ್ತೆ ಕಾರ್ಯದ ಶೈಲಿಯನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ.

ಕೋರ್‌ ಕಮಿಟಿಯಲ್ಲಿ ಪ್ರಸ್ತಾವ

 ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಸರಕಾರ ಹಾಗೂ ಪಕ್ಷಕ್ಕೆ ಹಾನಿಯಾಗದಂತೆ ಎಚ್ಚರದ  ಹೆಜ್ಜೆ ಇಡಲು ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸೂಚನೆ ನೀಡಲಾಗಿದೆ.    ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಸಿ.ಡಿ. ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಕೋರ್‌ ಕಮಿಟಿಯಲ್ಲಿ ಈ ವಿಚಾರ ಚರ್ಚೆ ಆಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next