Advertisement

ಪಿಜಿಯಲ್ಲಿದ್ದ ಸಾಕ್ಷ್ಯ ನಾಶ: ಸಂತ್ರಸ್ತೆಯಿಂದ ಆರೋಪ

12:09 AM Apr 05, 2021 | Team Udayavani |

ಬೆಂಗಳೂರು : ರಮೇಶ್‌ ಜಾರಕಿಹೊಳಿ ಅವರದು ಎನ್ನಲಾದ ಸಿ.ಡಿ. ಪ್ರಕರಣದಲ್ಲಿ ಸತತ 5 ದಿನಗಳ ಎಸ್‌ಐಟಿ ವಿಚಾರಣೆ ಎದುರಿಸಿದ ಸಂತ್ರಸ್ತೆ, ಈಗ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ 3 ಪುಟಗಳ ಪತ್ರ ಬರೆದು ನ್ಯಾಯಸಮ್ಮತವಾಗಿ ವಿಚಾರಣೆ ನಡೆಸುವಂತೆ ಕೋರಿದ್ದಾರೆ.

Advertisement

ಎಸ್‌ಐಟಿ ಮೇಲೆ ರಾಜಕೀಯ ಒತ್ತಡವಿರುವಂತೆ ಭಾಸವಾಗುತ್ತಿದೆ. ತನಿಖಾ ಸಂಸ್ಥೆಯ ವಿಚಾರಣೆ ಹಂತಗಳನ್ನು ಗಮನಿಸಿದರೆ ತಾನು ಸಂತ್ರಸ್ತೆಯೋ ಅಥವಾ ಆರೋಪಿಯೋ ಎಂಬ ಅನುಮಾನ ಕಾಡುತ್ತಿದೆ. ತನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿರುವ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ.

ಮತ್ತೂಂದೆಡೆ, ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಗೈರಾಗಿರುವ ರಮೇಶ್‌ ಜಾರಕಿಹೊಳಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next