Advertisement

ಪುತ್ತೂರಿನಲ್ಲಿ ‘ಪ್ರಾಜೆಕ್ಟ್ ಈಗಲ್‌ ಐ’

10:35 AM Nov 09, 2017 | Karthik A |

ಪುತ್ತೂರು: ರಾಜ್ಯದಲ್ಲೇ ಪ್ರಥಮವಾಗಿ ಸಾರ್ವಜನಿಕ ನೆರವಿನಲ್ಲಿ ಪುತ್ತೂರು ನಗರದ 13 ಕಡೆಗಳಲ್ಲಿ ಅಳವಡಿಸಲಾದ ಸಿ.ಸಿ. ಕೆಮರಾ ವ್ಯವಸ್ಥೆ -ಪ್ರಾಜೆಕ್ಟ್ ಈಗಲ್‌ ಐ ಇದರ ಕಂಟ್ರೋಲ್‌ ರೂಂ ಉದ್ಘಾಟನೆ ಬುಧವಾರ ನಡೆಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಅಪರಾಧ ಮುಕ್ತ ನಗರವಾಗುವತ್ತ ಹೆಜ್ಜೆ ಹಾಕುತ್ತಿದೆ. ಸಿ.ಸಿ. ಕೆಮರಾಗಳು ಒಂದೊಂದೇ ಜಂಕ್ಷನ್‌ಗಳಲ್ಲಿ ಅಳವಡಿಕೆಯಾಗುತ್ತಿದ್ದಂತೆ ಇಲ್ಲಿನ ಅಪರಾಧ ಪ್ರಮಾಣ ಕಡಿಮೆಯಾಗುತ್ತ ಬಂದಿದೆ. ಇದಕ್ಕಾಗಿ ಶ್ರಮಿಸಿದ ಪುತ್ತೂರು ನಗರ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌, ಸಿ.ಸಿ. ಕೆಮರಾಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳು, ಕಂಟ್ರೋಲ್‌ ರೂಂ ಸ್ಥಾಪನೆಗೆ ಮುಂದಾದ ಪುತ್ತೂರು ಕ್ಲಬ್‌ ಅಭಿನಂದನಾರ್ಹರು ಎಂದರು.

Advertisement

ನಿಯಂತ್ರಣಕ್ಕೂ ಸಹಕಾರಿ
ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿ.ಜೆ. ಸಜೀತ್‌ ಮಾತನಾಡಿ, ಪ್ರಮುಖ ನಗರವಾಗಿ ಬೆಳೆಯುತ್ತಿರುವ ಪುತ್ತೂರು ಈಗ ಸಂಪೂರ್ಣವಾಗಿ ಸಿ.ಸಿ. ಕೆಮರಾ ಕಣ್ಗಾವಲಿಗೆ ಒಳಪಟ್ಟಿದೆ. ಇದರಿಂದ ಅಪರಾಧಗಳ ಪತ್ತೆಯ ಜತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೂ ಸಹಕಾರಿ ಯಾಗಲಿದೆ. ಸಾರ್ವಜನಿಕರೇ ನೀಡಿದ ದೇಣಿಗೆಯಲ್ಲಿ ನಗರದ ವಿವಿಧೆಡೆ ಇಷ್ಟೊಂದು ಸಂಖ್ಯೆಯಲ್ಲಿ ಸಿ.ಸಿ. ಕೆಮರಾ ಅಳವಡಿಸಿರುವುದು ಬಹುದೊಡ್ಡ ಸಾಧನೆ. ಈ ಎಲ್ಲ ಕೆಮರಾಗಳ ಕಂಟ್ರೋಲ್‌ ರೂಂ ಪೊಲೀಸ್‌ ಠಾಣೆಯಲ್ಲೇ ಇರುವುದು ಇನ್ನೊಂದು ಬಹುದೊಡ್ಡ ಬೆಳವಣಿಗೆ ಎಂದರು.

ಒಟ್ಟು 13 ಸಿ.ಸಿ. ಕೆಮರಾ
ಒಟ್ಟು 13 ಸಿ.ಸಿ. ಕೆಮರಾಗಳಿಗೆ 11. 16 ಲಕ್ಷ ರೂ. ವೆಚ್ಚವಾಗಿದ್ದು, ದಾನಿಗಳೇ ನೀಡಿದ್ದಾರೆ. 1.80ಲಕ್ಷ  ರೂ. ವೆಚ್ಚದ ಕಂಟ್ರೋಲ್‌ ರೂಂನ್ನು ಪುತ್ತೂರು ಕ್ಲಬ್‌ ಪ್ರಾಯೋಜಿಸಿದೆ. 24 ಗಂಟೆಯೂ ಕೆಲಸ ಮಾಡುವ ಕೆಮರಾಗಳು ಪೊಲೀಸರ ಅನುಪಸ್ಥಿತಿಯಲ್ಲೂ ಮತ್ತೂಂದು ಶಕ್ತಿ ಕೆಲಸ ಮಾಡುವುದನ್ನು ಖಾತ್ರಿಪಡಿಸುತ್ತದೆ ಎಂದು ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next