Advertisement
ಬೆಂಗಳೂರಿನ ಮಜೀಬ್ ಪಾಷ (48), ಮೊಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40), ಸಂತೋಷ್ (31) ಮತ್ತು ರಾಯಚೂರಿನ ಜಗನ್ನಾಥಾಚಾರ್ (52) ಬಂಧಿತರು.
Related Articles
Advertisement
ಈ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಿದ್ದು, ಈತ ಸೆರೆ ಸಿಕ್ಕಿದರೆ ಈ ಅಂಬರ್‌ಗ್ರೀಸ್ ಗಟ್ಟಿಯನ್ನು ಎಲ್ಲಿಂದ ತರಲಾಗಿದೆ. ಎಲ್ಲಿಗೆ ಸಾಗಿಸಲಾಗುತ್ತದೆ ಎಂಬುದು ಪತ್ತೆಯಾಗಲಿದೆ ಎಂದು ಕಮಲ್ ಪಂತ್ ಹೇಳಿದರು.
ಇದನ್ನೂ ಓದಿ:ಅಂಬ್ರಿ ಇಂಕ್. ನೊಂದಿಗೆ 1,071 ಕೋಟಿ ರೂಪಾಯಿ ಹೂಡಿಕೆ ಮಾಡಲಿರುವ RNESL
ಜೂನ್.9ರಂದು ಕೆ.ಜಿ.ಹಳ್ಳಿ ಪೊಲೀಸರು ಆತನ ಸೂಚನೆ ಮೇರೆಗೆ ತಮ್ಮ ಠಾಣಾ ವ್ಯಾಪ್ತಿಯ ಎಂಆರ್‌ಕೆ ಟೆಂಟ್ ಹೌಸ್ ಬಳಿಯ ಲಕ್ಷ್ಮೀಪತಿ ಗಾರ್ಡನ್ ತೆಂಗಿನ ತೋಟದ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಅವರಿಂದ ಎಂಟು ಕೋಟಿ ರೂ. ಮೌಲ್ಯದ 8 ಕೆ.ಜಿ. 700 ಗ್ರಾಂ ತೂಕದ ಅಂಬರ್‌ಗ್ರೀಸ್ ವಶಕ್ಕೆ ಪಡೆಯಲಾಗಿತ್ತು.
ಅಂಬರ್‌ಗ್ರೀಸ್ ದಂಧೆಇತ್ತೀಚಿನ ದಿನಗಳಲ್ಲಿ ಅಂಬರ್‌ಗ್ರೀಸ್ ದಂಧೆ ದಿನೇದಿನೆ ಹೆಚ್ಚಾಗುತ್ತಿದೆ.ಎರಡು ತಿಂಗಳ ಹಿಂದೆ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನಾಲ್ವರು ಬಂಧಿಸಿ ಎಂಟು ಕೆ.ಜಿ.ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿತ್ತು.ಇದೀಗ 80 ಕೆ.ಜಿ. ವಶಕ್ಕೆ ಪಡೆಯಲಾಗಿದೆ.ಈ ಸಂಬಂಧ ಈ ದಂಧೆ ಕೋರರ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ನಿರಂತರ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪರಿಶೀಲನೆ
ಮತ್ತೊಂದೆಡೆ ಆರೋಪಿಗಳಿಂದ ಪತ್ತೆಯಾಗಿರುವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕಾಲದ ಪ್ರಾಚೀನ ವಸ್ತುಗಳು, ಸ್ಟಿಮ್ ಫ್ಯಾನ್‌ಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದೇ ಮಾದರಿಯ ವಸ್ತುಗಳು ಆನ್‌ಲೈನ್‌ನ ಈ- ಕಾಮರ್ಸ್‌ನಲ್ಲಿ ಲಭ್ಯವಿರುವುದರಿಂದ ಅವುಗಳ ಬಗ್ಗೆ ಇತಿಹಾಸಕಾರರ ಸಲಹೆ ಪಡೆಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಅಂಬರ್‌ಗ್ರೀಸ್‌ನ ವಿಶೇಷತೆ ಏನು?
ಅಂಬರ್‌ಗ್ರೀಸ್ ಎಂಬುದು ತಿಮಿಂಗಿಲದಿಂದ ಪಡೆದವೀರ್ಯ ಅಥವಾ ವಾಂತಿಯಾಗಿದ್ದು, ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಮತ್ತು ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಅದಕ್ಕೆ ಅರಬ್, ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸುಮಾರು ಒಂದು ಕೋಟಿರೂ.ಗೂ ಅಧಿಕ ಮೌಲ್ಯಯುಳ್ಳದಾಗಿದೆ ಎಂದು ಮೂಲಗಳು ತಿಳಿಸಿವೆ.