Advertisement

ಸಿಸಿಬಿ ಅಧಿಕಾರಿ ಸೋಗಿನಲ್ಲಿ ಉದ್ಯಮಿಯ ಬ್ಲ್ಯಾಕ್‌ ಮೆಲ್‌! ಪೊಲೀಸರಿಂದ ನಕಲಿ ಅಧಿಕಾರಿಯ ಬಂಧನ

05:32 PM Nov 22, 2020 | sudhir |

ಬೆಂಗಳೂರು: ಸಹೋದ್ಯೋಗಿ ಯುವತಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಉದ್ಯಮಿಯೊಬ್ಬರಿಗೆ ಸಿಸಿಬಿ ಪೊಲೀಸ್‌ ಅಧಿಕಾರಿಯ ಸೋಗಿನಲ್ಲಿ ಬ್ಲ್ಯಾಕ್‌ ಮೆಲ್‌ ಮಾಡುತ್ತಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

Advertisement

ನಾಗಸಂದ್ರ ನಿವಾಸಿ ಶ್ರೀನಿವಾಸ್‌ ಗದ್ದಿಗೆ (40) ಬಂಧಿತ. ಚೊಕ್ಕಸಂದ್ರದ ನಿವಾಸಿ ಸಂತ್ರಸ್ತ ಉದ್ಯಮಿ, ಕೇಬಲ್‌ ಕನೆಕ್ಷನ್‌ ಕಚೇರಿ ಹೊಂದಿದ್ದಾರೆ.

ಫೈನಾನ್ಸ್‌ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಕ್ಕದ ಮನೆಯ ಯುವತಿ ಜತೆ ಸ್ನೇಹ ಬೆಳೆದಿತ್ತು. ಕೆಲ ತಿಂಗಳ ಹಿಂದೆ ಯುವತಿ ಹಾಗೂ ಉದ್ಯಮಿ, ಪೀಣ್ಯದ ಬಸವೇಶ್ವರ ಬಸ್‌ ಟರ್ಮಿನಲ್‌ ಬಳಿಯ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಈ ವಿಚಾರ ಯುವತಿ ಕೆಲಸ ಮಾಡುತ್ತಿದ್ದ ಕಚೇರಿಯ ಮಾಲೀಕ ಶ್ರೀನಿವಾಸ್‌ಗೆ ಗೊತ್ತಾಗಿತ್ತು. ಅನಾಮಿಕ ನಂಬರ್‌ನಿಂದ ಉದ್ಯಮಿಗೆ ಕರೆ ಮಾಡಿದ್ದ ಶ್ರೀನಿವಾಸ್‌, “ತಾನು ಸಿಸಿಬಿ ಇನ್‌ಸ್ಪೆಕ್ಟರ್‌ ರಾಜು ಎಂದು ಹೇಳಿದ್ದ. ಯುವತಿ ಜತೆಗಿರುವ ಖಾಸಗಿ ವಿಡಿಯೋ ಇದೆ ಎಂದು ಬೆದರಿಸಿದ್ದ. ಬಳಿಕ ಕಚೇರಿಯಲ್ಲಿ ಯುವತಿ ಜತೆ ಮಾತನಾಡಿದ್ದ ಶ್ರೀನಿವಾಸ್‌, “ನೀನು ಉದ್ಯಮಿ ಜತೆ ಲಾಡ್ಜ್ ನಲ್ಲಿದ್ದ ವಿಚಾರವನ್ನು ಸಿಸಿಬಿ ಇನ್‌ಸ್ಪೆಕ್ಟರ್‌ ರಾಜು ತಿಳಿಸಿದ್ದಾರೆ. ಉದ್ಯಮಿಗೆ ನನ್ನನ್ನು ಭೇಟಿಯಾಗುವಂತೆ ತಿಳಿಸಿದ್ದ. ಈ ವಿಚಾರವನ್ನು ಯುವತಿ, ಉದ್ಯಮಿಗೆ ತಿಳಿಸಿದ್ದಳು.

ಇದನ್ನೂ ಓದಿ :ಮೂತ್ರಪಿಂಡ ವೈಫಲ್ಯದಿಂದ ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ

ಮರುದಿನ ಬೆಳಗ್ಗೆ ಶ್ರೀನಿವಾಸ್‌ನನ್ನು ಭೇಟಿ ಮಾಡಲು ಯುವತಿ ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಕಚೇರಿಗೆ ಉದ್ಯಮಿ ಹೋಗಿದ್ದಾಗ ಕಚೇರಿಯಲ್ಲಿ ಶ್ರೀನಿವಾಸ್‌ ಇರಲಿಲ್ಲ. ಆತನ ಫೋನ್‌ ನಂಬರ್‌ ಪಡೆದು ಕರೆ ಮಾಡಿದಾಗ, ಇನ್‌ಸ್ಪೆಕ್ಟರ್‌ ರಾಜು ನನ್ನನ್ನು ಭೇಟಿಯಾಗಿ ಎಲ್ಲ ವಿಚಾರ ಹೇಳಿದ್ದಾರೆ. ನಾನು ನೀನು ಒಂದೇ ಸಮುದಾಯದವರು. 10 ಲಕ್ಷ ರೂ. ಕೊಟ್ಟರೆ, ಪ್ರಕರಣವನ್ನು ಮುಚ್ಚಿ ಹಾಕಿಸೋಣ ಎಂದು ಶ್ರೀನಿವಾಸ್‌ ಹೇಳಿದ್ದ.

Advertisement

ಉದ್ಯಮಿ ಅಷ್ಟೊಂದು ಹಣವಿಲ್ಲ ಎಂದಾಗ 5 ಲಕ್ಷ ರೂ. ಹೊಂದಿಸುವಂತೆ ಸೂಚಿಸಿದ್ದ. ಆತನ ಮಾತನ್ನು ನಂಬಿದ ಉದ್ಯಮಿ, ಹಂತಹಂತವಾಗಿ ಒಟ್ಟು 5 ಲಕ್ಷ ರೂ. ಕೊಟ್ಟಿದ್ದ. ಕೆಲ ತಿಂಗಳ ನಂತರ ಸಿಸಿಬಿ ಇನ್‌ಸ್ಪೆಕ್ಟರ್‌ ರಾಜು ಹೆಸರಿನಲ್ಲಿ ಮತ್ತೆ ಕರೆ ಮಾಡಿ 9 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಕುರಿತು ಉದ್ಯಮಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಅನುಮಾನದ ಮೇರೆಗೆ ಶ್ರೀನಿವಾಸ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next