ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಉಗ್ರ ಕೃತ್ಯ ಎಸಗಲು ಸಿದ್ಧತೆ ನಡೆಸಿದ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಲಷ್ಕರ್ -ಎ-ತೊಯ್ಬಾ ಸಂಘಟನೆ ಸದಸ್ಯ ಜುನೈದ್‌ಗೆ ಪ್ರೇಯಸಿ ಇರುವ ವಿಚಾರವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕೆಯ ಜತೆ ಇತ್ತೀಚಿನ ದಿನಗಳವರೆಗೆ ಸಂಪರ್ಕದಲ್ಲಿದ್ದ ಜುನೈದ್ ಯಾವ ದೇಶ ದಲ್ಲಿ ಇದ್ದಾನೆ ಎಂಬುದು ಪತ್ತೆಯಾಗಿದೆ. ಆದರೆ, ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿ ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಆತ ಮಧ್ಯ ಏಷ್ಯಾ ಅಥವಾ ಯುರೋಪ್ ರಾಷ್ಟ್ರ ದಲ್ಲಿ ಇರುವ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ಸ್ಫೋಟ, ಕೋಝಿಕೋಡ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾದ ಎಲ್‌ಇಟಿ ಸದಸ್ಯ ಪಾಕ್ ಮೂಲದ ಮೊಹಮ್ಮದ್ ಫಹಾದ್ ಕೋಯಾ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಸ್ಫೋಟ ಪ್ರಕರಣದ ಶಂಕಿತ ಅಫÕರ್ ಪಾಷಾ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇವರು 2011ರಲ್ಲಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರೌಡಿಶೀಟರ್ ಅಬ್ದುಲ್ ರೆಹ ಮಾನ್ ಎಂಬಾತನನ್ನು ಉಗ್ರ ಸಂಘಟನೆ ಸೇರು ವಂತೆ ಪ್ರಚೋದಿಸಿದ್ದರು ಎಂಬುದು ಪತ್ತೆಯಾಗಿದೆ.
ರೆಹಮಾನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಕೆಲ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂಬ ಕಾರಣಕ್ಕೆ 2012ರಲ್ಲಿ ಪೊಲೀಸರು ಬಂಧಿಸಿದ್ದರು. ಈ ಮೂಲಕ ಪರ ಪ್ಪನ ಅಗ್ರಹಾರ ಜೈಲಿನಲ್ಲಿ ನಾಜೀರ್ ಮಾತ್ರವಲ್ಲ ಮೊಹಮ್ಮದ್ ಫಹಾದ್ ಕೋಯಾ ಮತ್ತು ಅಫÕರ್ ಪಾಷಾ ಕೂಡ ತಮ್ಮ ಸಮುದಾಯದ ವ್ಯಕ್ತಿಗಳನ್ನು ಉಗ್ರ ಚಟುವಟಿಕೆ ಬೋಧನೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಸದ್ಯ ಇಬ್ಬರು ಶಂಕಿತರು ಜೈಲಿನಲ್ಲಿದ್ದು, ಜುನೈದ್‌ಗೆ ಇವರು ಕೂಡ ಉಗ್ರ ತರಬೇತಿ ಮತ್ತು ವಿದೇಶದ ಸಂಘಟನೆ ಸದಸ್ಯರ ಭೇಟಿಗೆ ಸಹಕಾರ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.