Advertisement

ಸಿಸಿಬಿ ಪೊಲೀಸರ ಭಾರೀ ಕಾರ್ಯಾಚರಣೆ :ಸಿಲಿಕಾನ್‌ಸಿಟಿ ರೌಡಿಗಳ ನಡುಕ !

09:32 AM Dec 19, 2018 | |

ಬೆಂಗಳೂರು: ಸಿಸಿಬಿ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ  ಭೂಗತ ಪಾತಕಿಗಳು ಮತ್ತು ರೌಡಿ ಶೀಟರ್‌ಗಳ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ.

Advertisement

8 ತಂಡಗಳಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ನಗರದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿರುವ ರೌಡಿ ಶೀಟರ್‌ಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಯಲಹಂಕ, ಕೋಡಿಗೆ ಹಳ್ಳಿ, ಬೈಯಪ್ಪನ ಹಳ್ಳಿ , ಅಮೃತ ಹಳ್ಳಿ ಕೆ.ಆರ್‌.ಪುರ, ಬಾಣಸವಾಡಿ  ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದ್ದು, ಕೆ.ಆರ್‌.ಪುರ ಅಜಿತ್‌, ಸೈಲೆಂಟ್‌ ಸುನೀಲ್‌ , ತೊದುÉ ಮಂಜ, ಬಾಕ್ಸರ್‌ ಮಂಜ ಸೇರಿದಂತೆ ಕೆಲ ರೌಡಿ ವೀಟರ್‌ಗಳ ಮನೆ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ. 

ಹಲವು ಆಸ್ತಿ ಪತ್ರ ಮತ್ತು ಮಾರಕಾಯುಧಗಳನ್ನು ಜಪ್ತಿ ಮಾಡಿರುವ ಬಗ್ಗೆ ವರದಿಯಗಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next