Advertisement
ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಶಂಕಿತ ಉಗ್ರರು.
2017ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದ್ದ ಮೂವರ ಕಿಡ್ನ್ಯಾಪ್, ಓರ್ವನ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದರು. ಜುನೈದ್ ಮತ್ತು ತಂಡ ನೂರ್ ಅಹ್ಮದ್ನನ್ನು ಅಪಹರಿಸಿ ಹತ್ಯೆ ಮಾಡಿತ್ತು. ಈ ಕೊಲೆ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಜುನೈದ್ ಜೈಲಿನಲ್ಲಿ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ. ಜೈಲು ಸೇರಿರುವ ನಮ್ಮ ಆಪ್ತರು ಸಂಘಟನೆಗಾಗಿ ಕೆಲಸ ಮಾಡುವುದಾಗಿ ಉಗ್ರ ಸಂಘಟನೆ ನಿಭಾಯಿಸುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಬಂಧಿತರು ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವುದು ಸಿಸಿಬಿಗೆ ಸುಳಿವು ಸಿಕ್ಕಿತ್ತು. ಈ ಬಗ್ಗೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Related Articles
ಮಡಿವಾಳ ಟೆಕ್ನಿಕಲ್ ಸೆಲ್ನಲ್ಲಿ ಬಂಧಿತರ ತೀವ್ರ ವಿಚಾರಣೆ ನಡೆಯುತ್ತಿದೆ. ವಿಧ್ವಂಸಕ ಕೃತ್ಯಗಳ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಬಾಂಬ್ ಸ್ಫೋಟ ಸೇರಿದಂತೆ ಹಲವು ಕೃತ್ಯಗಳ ಬಗ್ಗೆ ತರಬೇತಿ ಪಡೆಯುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ಪ್ರಮುಖ ಆರೋಪಿಗಾಗಿ ಶೋಧ:ಸಿಸಿಬಿ ಬಂಧಿಸಿದ ಬಹುತೇಕ ಶಂಕಿತ ಉಗ್ರರು ಪ್ರಕರಣದ ಪ್ರಮುಖ ಆರೋಪಿ ಜುನೈದ್ ಅಹ್ಮದ್ ಆಪ್ತರು. ಸದ್ಯ ಆತ ನಾಪತ್ತೆಯಾಗಿದ್ದಾನೆ. ಜುನೈದ್ ಅಹ್ಮದ್ ಕೊಲೆ, ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿ ಜೈಲಿನಿಂದ ಹೊರಬರುವಾಗ ಶಂಕಿತ ಉಗ್ರನಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಶಿಮ್ಲಾ ರೆಸ್ಟೋರೆಂಟ್ ನಲ್ಲಿ ಸಿಲಿಂಡರ್ ಸ್ಫೋಟ: ಓರ್ವ ಮೃತ್ಯು, 10 ಮಂದಿಗೆ ಗಾಯ ಸಿಕ್ಕಿ ಬಿದ್ದಿದ್ದು ಹೇಗೆ ?
ಬೆಂಗಳೂರು ಸಿಸಿಬಿಗೆ ಸಿಕ್ಕಿದ ಸುಳಿವು ಆಧರಿಸಿ ತನಿಖೆ ನಡೆಸಲಾಗಿತ್ತು. ಶಂಕಿತರ ಲೊಕೇಶನ್ ಟ್ರೇಸ್ ಮಾಡಿದಾಗ
ಕನಕನಗರದ ಸುಲ್ತನಾಪಾಳ್ಯದ ಮಸೀದಿ ಬಳಿ ಪತ್ತೆಯಾಗಿದ್ದಾರೆ. ಸಂಚಿಗೆ ಸಂಬಂಧಿಸಿದ ಮೀಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರಲ್ಲಿ ಸ್ಫೋಟ ನಡೆಸಲು ಶಂಕಿತರು ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ. 2008ರ ಬೆಂಗಳೂರು ಸೀರಿಯಲ್ ಬ್ಲಾಸ್ಟ್ ಕೇಸ್ ರೂವಾರಿ ಜುನೈದನನ್ನು ಆರೋಪಿಗಳು ಜೈಲಿನಲ್ಲಿ ಪರಿಚಯಿಸಿಕೊಂಡಿದ್ದರು. ಜುನೈದ್ ಮೂಲಕ ಸ್ಫೋಟಕ್ಕೆ ಈ ಐವರು ಸಂಚು ರೂಪಿಸಿದ್ದರು. ಬಾಂಬ್‌ಗೆ ಬೇಕಾದ ರಾ ಮೆಟೀರಿಯಲ್ ರೆಡಿ ಮಾಡಿದ್ದರು. ಇವರ ಜೊತೆ ಇನ್ನೂ ಹಲವರು ಸೇರಿ ಕೃತ್ಯಕ್ಕೆ ಪ್ಲ್ಯಾನ್ ನಡೆಸಿದ್ದರು. ಬಂಧಿತರ ಸಂಪರ್ಕದಲ್ಲಿದ್ದವರಿಗೆ ಶೋಧ. 2 ಸ್ಯಾಟಲೈಟ್ ಫೋನಿನಂತಿರುವ ವಾಕಿಟಾಕಿ, 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, ಮೊಬೈಲ್ ಫೋನ್, ವಿವಿಧ ಕಂಪನಿ ಸಿಮ್‌ಗಳು, ಲ್ಯಾಪ್ ಟಾಪ್ ಜಪ್ತಿ.