Advertisement

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಹಿತ ಓರ್ವನ  ಬಂಧನ

12:30 AM Mar 01, 2019 | Team Udayavani |

ಮಂಗಳೂರು:  ನಗರದಲ್ಲಿ  ಸಾರ್ವ ಜನಿಕರಿಗೆ ಮಾದಕ ವಸ್ತುವಾದ ಎಂಡಿಎಂಎ  ಮಾರಾಟ ಮಾಡಲು ಯತ್ನಿಸುತ್ತಿದ್ದ  ಸುರತ್ಕಲ್‌ ಚೊಕ್ಕಬೆಟ್ಟು ನಿವಾಸಿ ಮಹಮ್ಮದ್‌ ಶಫೀಕ್‌ ಯಾನೆ ಚಪ್ಪಿ (21)ಯನ್ನು  ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

Advertisement

ಆರೋಪಿ ಮಹಮದ್‌ ಶಫೀಕ್‌ ನಿಷೇಧಿತ ಮಾದಕ ವಸ್ತು ಎಂಡಿಎಂಎ (ಮಿಥಿಲಿನ್‌ ಡಯೋಕ್ಸಿ  ಮೆತಂಫೆಟ್‌- ಆಮೈನ್‌) ಅನ್ನು ಮುಂಬಯಿಯಿಂದ ಖರೀದಿಸಿ ಮಂಗಳೂರಿಗೆ ತಂದು  ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

ಆರೋಪಿಯಿಂದ 60 ಗ್ರಾಂ ತೂಕದ 1,80,000 ರೂ. ಬೆಲೆಯ ಎಂಡಿಎಂಎ ಮತ್ತು ಮೊಬೈಲ್‌ ಫೋನ್‌ ಸಹಿತ ಒಟ್ಟು  1,83,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಸುರತ್ಕಲ್‌ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ  ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು,  ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಮ, ಪಿಎಸ್‌ಐ  ಶ್ಯಾಮ್‌ ಸುಂದರ್‌, ಕಬ್ಟಾಳ್‌ರಾಜ್‌ ಹಾಗೂ ಸಿಬಂದಿ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next