Advertisement

ನಟಿ ರಾಧಿಕಾಗೆ ಸಿಸಿಬಿ ನೋಟಿಸ್‌

11:33 PM Jan 07, 2021 | Team Udayavani |

ಬೆಂಗಳೂರು: ಮಹಾವಂಚಕ ಯುವರಾಜ್‌ ಜತೆ ಹಣಕಾಸು ವ್ಯವಹಾರ ನಡೆಸಿದ ಆರೋಪದ ಮೇಲೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಯುವರಾಜ್‌ ಮತ್ತು ರಾಧಿಕಾ ನಡುವೆ ಯಾದವ್‌ ಎಂಬಾತ ಮಧ್ಯವರ್ತಿಯಾಗಿ ದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಆತನನ್ನೂ ಸದ್ಯದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ. ರಾಧಿಕಾ ಸಹೋದರ ರವಿರಾಜ್‌ ಕೂಡ ಶುಕ್ರವಾರ ವಿಚಾರಣೆಗೆ ತೆರಳಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next