Advertisement

ಬೆಂಗಳೂರು ಟರ್ಫ್ ಕ್ಲಬ್‌ ಮೇಲೆ ಸಿಸಿಬಿ ದಾಳಿ

12:33 PM Dec 01, 2018 | Team Udayavani |

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ (ಬಿಟಿಸಿ) ಆವರಣದಲ್ಲಿ ಅಕ್ರಮವಾಗಿ ಕುದುರೆ ರೇಸ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 10 ಮಂದಿಯನ್ನು ಸಿಸಿಬಿಯ ವಿಶೇಷ ವಿಚಾರಣಾ ತಂಡ ಶುಕ್ರವಾರ ಸಂಜೆ ಬಂಧಿಸಿದೆ.

Advertisement

ಜ್ಯೋತಿ ಬಸು (43), ಅಂಜಿನಪ್ಪ (42), ವಿನೋದ್‌ ಕುಮಾರ್‌ (29), ಕಬೀರ್‌ ಅಹಮದ್‌ (41), ನವಾಜ್‌ ಅಹಮದ್‌ ಖಾನ್‌ (48), ಹರೀಶ್‌ (50), ತಿಮ್ಮರಾಜು (52), ಅಜಯ್‌ ಕುಮಾರ್‌ (37), ಲಿಯಾಕತ್‌ (52), ಕೇಶವ (35) ಬಂಧಿತರು. ಆರೋಪಿಗಳಿಂದ 5,91,000 ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಆರೋಪಿಗಳು ಟರ್ಫ್ ಕ್ಲಬ್‌ನ ಗೇಟ್‌ ನಂ3ರ ಬಳಿ ಅಕ್ರಮವಾಗಿ ಕುದುರೆ ರೇಸ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ವಿಶೇಷ ವಿಚಾರಣಾ ದಳದ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. 

ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ಕಳೆದ ಕೆಲ ವರ್ಷಗಳಿಂದ ಅಕ್ರಮ ದಂಧೆಯಲ್ಲಿ ತೊಡಗಿದ್ದು, ಬೆಂಗಳೂರು ಟರ್ಫ್ ಕ್ಲಬ್‌ಗ ಲಕ್ಷಾಂತರ ರೂ. ನಷ್ಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು. ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜಾಟ-12 ಮಂದಿ ಬಂಧನ: ಎಚ್‌ಎಸ್‌ಆರ್‌ ಲೇಔಟ್‌ನ ಮಂಗಮ್ಮನಪಾಳ್ಯದಲ್ಲಿ ಅಕ್ರಮವಾಗಿ ಅಂದರ್‌-ಬಾಹರ್‌ ಜೂಜಾಟದಲ್ಲಿ ತೊಡಗಿದ್ದ 12 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಮೂರ್ತಿ(36), ಶಿವಕುಮಾರ್‌(38), ಸಂತೋಷ್‌ ಕುಮಾರ್‌(28), ಚಂದ್ರು(26), ಮೋಹನ್‌ ರಾಜು(32), ರಘು (25), ನವೀನ್‌ (28), ಅವಿನಾಶ್‌ (28), ಸಾಯಿಕುಮಾರ್‌ (28), ಮುನಿರೆಡ್ಡಿ (31), ಕೃಷ್ಣ (31), ದಿನೇಶ್‌ ತಾಪ (28) ಬಂಧಿತರು.

ಆರೋಪಿಗಳಿಂದ 1,51, 500 ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಎಚ್‌ಎಸ್‌ಆರ್‌ ಲೇಔಟ್‌,ಮಂಗಮ್ಮನಪಾಳ್ಯ, ಯಲಕುಂಟೆ ನಿವಾಸಿಗಳು ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next