Advertisement

ಸುರಕ್ಷತೆಗೆ 400 ಕಡೆ ಸಿಸಿ ಟಿವಿ ಅಳವಡಿಕೆ

12:31 PM May 08, 2018 | Team Udayavani |

ಬೆಂಗಳೂರು: ಗೋವಿಂದರಾಜನಗರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಸೋಮವಾರ ನಾಗರಬಾವಿ ವಾರ್ಡ್‌ನಲ್ಲಿ  ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಕಾಂಗ್ರೆಸ್‌ನ ಪಾಲಿಕೆ ಸದಸ್ಯರು, ಕಾರ್ಯಕರ್ತರು ಹಾಗೂ ಮುಖಂಡರ ಜತೆಗೂಡಿ ಪಾದಯಾತ್ರೆ ನಡೆಸಿದ ಅವರು, ಮತ್ತೂಮ್ಮೆ ಆಶೀರ್ವಾದ ನೀಡುವಂತೆ ಕೋರಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 2233 ಫ‌ಲಾನುಭವಿಗಳ ಆಯ್ಕೆ ಮಾಡಲಾಗಿದೆ. ಒಂಟಿ ಮನೆ ಯೋಜನೆಯಡಿ 107 ಕೋಟಿ ರೂ. ವೆಚ್ಚದಲ್ಲಿ 2156 ಫ‌ಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ.

15 ಕೋಟಿ ರೂ. ವೆಚ್ಚದಲ್ಲಿ ಗೋವಿಂದರಾಜನಗರ ಹಂತ -1 ಮತ್ತು ಹಂತ-2, ಕನಕನಗರ, ಅಗ್ರಹಾರ ದಾಸರಹಳ್ಳಿ, ಗಂಗೊಂಡನಹಳ್ಳಿ ಹಾಗೂ ಪಂತರಪಾಳ್ಯದ ಕೊಳಗೇರಿ ನಿವಾಸಿಗಳಿಗೆ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಒಳಚರಂಡಿ, ಸಮುದಾಯದ ಭವನ ನಿರ್ಮಾನ ಕಾರ್ಯ ಪ್ರಗತಿಯಲ್ಲಿದೆ.

ಹಕ್ಕುಪತ್ರ/ನೋಂದಣಿ ಪತ್ರ ವಿತರಣೆ ಮಾಡಲಾಗಿದ್ದು 40 ವರ್ಷದಿಂದ ನೆನಗುದಿಗೆ ಬಿದ್ದಿದ್ದ ಪಂಚಶೀಲ ನಗರ ನಿವಾಸಿಗಳಿಗೆ ಬಿಬಿಎಂಪಿ ವತಿಯಿಂದ ಖಾತಾ ಮಾಡಿಕೊಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, 4 ಕೋಟಿ ರೂ. ವೆಚ್ಚದಲ್ಲಿ 400 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಪೊಲೀಸ್‌ ಠಾಣೆಗಳಿಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಅಪರಾಧ ಪ್ರಕರಣ ನಿಯಂತ್ರಣ, ಸರಗಳ್ಳತನ ನಿಗ್ರಹಕ್ಕೆ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next