ಸಿಂಧನೂರು: ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ವೆಂಕಟರಾವ್ ನಾಡಗೌಡ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಉದ್ಬಾಳ (ಇಜೆ)ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ಕೆಲಸಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಗುಣಮಟ್ಟ ಕೆಲಸಗಳನ್ನು ತೆಗೆದುಕೊಳ್ಳಲು ಸ್ಥಳೀಯರು ಒತ್ತು ನೀಡಬೇಕು. ಏನಾದರೂ ಲೋಪಗಳು ಕಂಡುಬಂದಾಗ, ಸಂಬಂ ಧಿಸಿದವರ ಗಮನಕ್ಕೆ ತರಬೇಕು ಎಂದರು.
ಅಲಬನೂರು ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಹರೇಟನೂರು ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ವಳಬಳ್ಳಾರಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಹೆಡಗಿನಾಳ ಗ್ರಾಮದಲ್ಲಿ 25 ಲಕ್ಷ ರೂ., ಚಿಂತಮಾನದೊಡ್ಡಿಯಲ್ಲಿ 25 ಲಕ್ಷ ರೂ., ಹಲುಗುಂಚಿ ಗ್ರಾಮದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಗಳಿಗೆ ಇದೇ ವೇಳೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ಅಯ್ಯನಗೌಡ ಆಯನೂರು, ಚಂದ್ರಭೂಪಾಲ ನಾಡಗೌಡ, ವೀರೇಶ ಉದ್ಬಾಳ, ಶ್ರೀನಿವಾಸ್ ಗೋಮರ್ಸಿ, ರಾಜಾ ಉದ್ಬಾಳ, ಚನ್ನಬಸವ ಇದ್ದರು.
ಮನೆ-ಮನೆಗೆ ದಾಖಲೆ ವಿತರಣೆ
ಸ್ವಾಮಿತ್ವ ಯೋಜನೆಯಡಿ ಕಂದಾಯ ದಾಖಲೆಗಳನ್ನು ಜನರ ಮನೆಗೆ ತಲುಪಿಸುವ ಯೋಜನೆಯನ್ನು ಶಾಸಕ ವೆಂಕಟರಾವ್ ನಾಡಗೌಡ ಉದ್ಘಾಟಿಸಿದರು. ಜಿಪಂ, ತಾಪಂ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಸಹಭಾಗಿತ್ವದಲ್ಲಿ ಕೈಗೊಂಡಿರುವ ಈ ಯೋಜನೆಯಡಿ ಕಂದಾಯ ದಾಖಲೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದರು.