ಸುವರ್ಣ ಸೌಧ: ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಘಾಟ್‌ಗಳ ರಸ್ತೆಗಳ ಸುವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದ್ದು, ಕೇಂದ್ರದ ಒಪ್ಪಿಗೆ ದೊರೆತ ತಕ್ಷಣ ಘಾಟ್‌ಗಳ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ಶಿರಾಡಿ, ಚಾರ್ಮಾಡಿ, ಸಂಪಾಜೆ, ಅರಬೈಲ್, ಆಗುಂಬೆ, ಮಾಲಾ, ಕೊಲ್ಲೂರು, ನಾಗೋಡಿ,ತೈನ್, ದೇವಿಮಾನ್, ಅಣಸಿ, ಕೈಗಾ, ವಡ್ಡಿ, ದೊಡ್ಮನೆ, ಮೆಣಸಿ,ಚೋರ್ಲಾ, ಬಾಳೇಬರೆ ಹಾಗೂ ಬಿಸಿಲೆ ಘಾಟ್‌ಗಳಲ್ಲಿ ಕೆಲವು ಘಾಟ್‌ಗಳು ರಾಷ್ಟಯ ಹೆದ್ದಾರಿಯಲ್ಲಿ ಹಾದು ಹೋಗುತ್ತವೆ.
2018-19 ರಲ್ಲಿ ಉಂಟಾದ ಭಾರಿ ಮಳೆಯಿಂದ 26 ಕಣಿವೆ ಭಾಗಗಳಲ್ಲಿ ಭೂಕುಸಿತ ಉಂಟಾಗಿದ್ದು, ಈ ಪ್ರದೇಶಗಳಲ್ಲಿ ಭೂಕುಸಿತ ತಡೆಯಲು ಮೈಕ್ರೊ ಪಿಲ್ಲಿಂಗ್ ಸಾಯಿಲ್ ನೇಲಿಂಗ್ ತಂತ್ರನಾನದ ಮೂಲಕ ರಸ್ತೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : ಸರ್ಕಾರದಿಂದ ನೇಕಾರರಿಗೆ ವಂಚನೆ ಕಾರ್ಯ ನಿಲ್ಲಲಿ : ಶಂಕರ ಬಿದರಿ
ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಉಮಾನಾಥ ಕೋಟ್ಯಾನ್, ಪಶ್ಚಿಮ ಘಟ್ಟದ 8 ಘಾಟ್‌ಗಳಲ್ಲಿ ನಿರಂತರ ಮಳೆಯಿಂದ ರಸ್ತೆಗಳು ಧಾರಣಾ ಶಕ್ತಿ ಕಳೆದುಕೊಂಡಿವೆ. ಹಿಮಾಲಯದಲ್ಲಿ ಬಳಸುವ ತಂತ್ರಜಾ°ನ ಮಾದರಿಯಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಘಾಟ್‌ಗಳ ಆಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಹಿಮಾಲಯದಲ್ಲಿರುವ ಘಾಟ್ ಗಳ ಆಭಿವೃದ್ಧಿ ಮಾಡಲು ಮನವಿ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.