Advertisement

ಕೆಟ್ಟು ನಿಂತಿರುವ ಸಿಸಿ ಕ್ಯಾಮರಾಗಳ ದುರಸ್ತಿ ಯಾವಾಗ?

02:48 PM Oct 14, 2020 | Suhan S |

ನಂಜನಗೂಡು: ನಗರದ ಆಯಾಕಟ್ಟಿನ ಜಾಗದಲ್ಲಿ ಅಳಡಿಸಲಾಗಿದ್ದ ಬಹುತೇಕ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿವೆ. ಯಾವಾಗ ದುರಸ್ತಿಪಡಿಸಿ, ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ ಎಂಬುದೇ ತಿಳಿಯದಂತಾಗಿದೆ.

Advertisement

ದುಷ್ಕರ್ಮಿಗಳು ಹಾಗೂ ಕಿಡಿಗೇಡಿಗಳ ಚಲನವಲನಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಅಪರಾಧ ಕೃತ್ಯಗಳನ್ನು ತಡೆಯಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಇವುಗಳು ಕೆಟ್ಟುಹೋಗಿರುವುದರಿಂದಕಣ್ಗಾವಲುವ್ಯವಸ್ಥೆಯೇ ಇಲ್ಲದಂತಾಗಿದೆ.

ನಗರದ ಪ್ರಮುಖ ವೃತ್ತಗಳಲ್ಲಿ 2017ರಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಸಂಸದ ಶ್ರೀನಿವಾಸ್‌ ಪ್ರಸಾದ್‌ಕಂದಾಯಸಚಿವರಾಗಿದ್ದಾಗ ಅಂಬೇಡ್ಕರ್‌ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮಿಕ್ಕ ಕ್ಯಾಮರಾಗಳನ್ನುಅಂದಿನ ಪಟ್ಟಣ ಠಾಣೆಯಎಸ್‌ಐ ಚೇತನ್‌ ಕುಮಾರ ಮನವಿ ಮೇರೆಗೆ2017ರಲ್ಲಿ ಜಾಂಬೋರಿ(ಎನ್‌ಎಸ್‌ಎಸ್‌ರಾಷ್ಟ್ರೀಯ ಸಮಾವೇಶ) ಸಮಯದಲ್ಲಿ ನಗರದಲ್ಲಿ 30 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಇದಕ್ಕೆ ಅಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ರವಿ ಚೆನ್ನಣ್ಣನವರ್‌ ನೆರವಾಗಿದ್ದರು. ಪ್ರಮುಖ ವೃತ್ತ ಸೇರಿದಂತೆ ನಗರದ ಆಯಕಟ್ಟಿನ ಪ್ರದೇಶಗಳ ನೇರ ದೃಶ್ಯಗಳು ಪಟ್ಟಣ ಠಾಣೆಯಲ್ಲಿ ಗೋಚರವಾಗುವಂತಹ ವ್ಯವಸ್ಥೆ ಕಲ್ಪಿಸಲಾಗಿತ್ತು.

2017ರಲ್ಲಿ ಶ್ರೀಕಂಠೇಶ್ವರ ದೇವಾಲಯದ ಬಳಿ,ಮುಡಿಕಟ್ಟೆ, ರೈಲ್ವೆ ಗೇಟ್‌, ಹುಲ್ಲಹಳ್ಳಿ ವೃತ್ತ, ಚಿಂತಾಮಣಿ ಗಣಪತಿ ದೇವಾಲಯದ ವೃತ್ತ, ನೆಹರು ವೃತ್ತ, ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಬಸ್‌ ನಿಲ್ದಾಣ, ಅಂಬೇಡ್ಕರ್‌ ವೃತ್ತ, ಹಳ್ಳದ ಕೇರಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಡೆ ಆಗ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅಲ್ಲಿನ ದೃಶ್ಯಾವಳಿಗಳನ್ನು ಪಟ್ಟಣ ಠಾಣೆಯಿಂದಲೇ ವೀಕ್ಷಿಸಲಾಗುತ್ತಿತ್ತು. ಅಪರಾಧಕೃತ್ಯಗಳು,ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಈ  ಕಣ್ಗಾವಲು ವ್ಯವಸ್ಥೆ ಸಹಾಯವಾಗುತ್ತಿತ್ತು. ಆದರೆ, ಇದೀಗ ಬಹುತೇಕ ಸಿಸಿ ಕ್ಯಾಮರಾಗಳು ಏನಾದವೋ ಎಂಬುದೇ ಯಾರಿಗೂ ಗೊತ್ತಿಲ್ಲ.ಕೆಲವು ಕಡೆ ಕ್ಯಾಮರಾಗಳಿದ್ದರೆ ಅದರ ಸಂಪರ್ಕದ ಜಾಲ ಸ್ಥಗಿತವಾಗಿರಬಹುದು ಇಲ್ಲವೇ ಕಡಿತಗೊಳಿಸಲಾಗಿದೆ.

2018ರಲ್ಲಿ ನಗರದ ರಾಷ್ಟ್ರಪತಿ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ರಥಬೀದಿಗಳ ರಸ್ತೆಯಲ್ಲಿ ರಸ್ತೆ ಮತ್ತಿತರ ಕಾಮಗಾರಿಗಳು ನಡೆಯುವಾಗ ಈ ಸಿಸಿ ಕ್ಯಾಮರಾಗಳ ಸಂಪರ್ಕದ ಜಾಲ ಕಡಿತಗೊಂಡಿರಬಹುದು ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಅಂಬೇಡ್ಕರ್‌ ವೃತ್ತದಲ್ಲಿನ ಕ್ಯಾಮರಾವನ್ನುಎಸ್‌ಐ ರವಿಕುಮಾರ್‌ ದುರಸ್ತಿಪಡಿಸಿದ್ದಾರೆ.ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಿಸಿ ಕ್ಯಾಮರಾ ಇದಾಗದೆ.

Advertisement

ಕಳ್ಳರು,ಕಿಡಿಗೇಡಿಗಳ ಸೆರೆಗೆಕಣ್ಗಾವಲು ವ್ಯವಸ್ಥೆ ಇಲ್ಲ : ನಗರದಲ್ಲಿ ಅಳವಡಿಸಿದ್ದ ಬಹುತೇಕ ಸಿಸಿ ಕ್ಯಾಮರಾಗಳುಕೆಟ್ಟು ಹೋಗಿವೆ. ಅಂಬೇಡ್ಕರ್‌ ವೃತ್ತದಲ್ಲಿನಸಿಸಿ ಟಿವಿ ಮಾತ್ರಕಾರ್ಯನಿರ್ವಹಿಸುತ್ತಿದೆ. ನಗರ ವ್ಯಾಪ್ತಿಯಲ್ಲಿ ಸತತವಾಗಿ ಕಳ್ಳತನಗಳು ಹೆಚ್ಚಾಗತೊಡಗಿದ್ದು, ಸಿಸಿ ಕ್ಯಾಮರಾಗಳು ಇಲ್ಲದಿರುವುದೇಕಳ್ಳರಿಗೆ, ದುಷ್ಕರ್ಮಿಗಳಿಗೆ ಭಯ ಇಲ್ಲದಂತಾಗಿದೆ. ಸುಮಾರು ಎರಡು ವರ್ಷಗಳಿಂದಕೆಟ್ಟು ಹೋಗಿರುವ ಈ ಸಿಸಿ ಕ್ಯಾಮರಾಗಳನ್ನು ದುರಸ್ತಿ ಪಡಿಸಲು ಪೊಲೀಸ್‌ ಇಲಾಖೆ ಯಲ್ಲಿ ಹಣವಿಲ್ಲ. ನಗರಸಭೆಗೆ ಇದರ ಉಸಾಬರಿಯೇ ಬೇಕಿಲ್ಲ. ಇವುಗಳ ನಿರ್ವಹಣೆಯ ಹೊಣೆಯನ್ನು ಪೊಲೀಸ್‌ ಇಲಾಖೆಯೇ ಹೊರಬೇಕಾಗಿದೆ.

ನಗರದಲ್ಲಿ ಸಿಸಿ ಕ್ಯಾಮರಾಗಳು ದುರಸ್ತಿ ಪಡಿಸುವ ಸಂಬಂಧ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು. ಅಲ್ಲಿಂದಬರಬಹುದಾದ ಆದೇಶದ ಮೇರೆಗೆ ಮುಂದಿನ ಕೃಮ ಕೈಗೊಳ್ಳಲಾಗುವುದು. – ರವಿಕುಮಾರ್‌, ನಗರ ಠಾಣೆ ಎಸ್‌ಐ

 

ಶ್ರೀಧರ್‌ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next