ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ ಎಂದು ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ. ಗಂಗಾಧರಪ್ಪ ತಿಳಿಸಿದ್ದಾರೆ.
Advertisement
ನಗರದ ಸರ್ಕಾರಿ ಸ್ವತಂತ್ರ ಪಪೂ ಮಹಿಳಾ ಕಾಲೇಜಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಸಿಸಿ ಕ್ಯಾಮರಾ ಅಳವಡಿಕೆಯಿಂದ ನಕಲು ಮಾಡಲು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೇಳಿ ಕೊಡಲು ಆಗುವುದಿಲ್ಲ ಎಂದರು. ಜಿಲ್ಲೆಯಲ್ಲಿ ಒಟ್ಟು 33 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 19 ಸರ್ಕಾರಿ ಪಪೂ ಕಾಲೇಜು ಹಾಗೂ 17 ಖಾಸಗಿ ಕಾಲೇಜುಗಳಲ್ಲಿ
ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜೊತೆಗೆ ರಾಜ್ಯ, ಜಿಲ್ಲಾ ಮಟ್ಟದ ಸ್ಕ್ವಾಡ್‌ಗಳು ಪ್ರತಿ ಕಾಲೇಜಿಗೆ ದಿಢೀರ್
ಭೇಟಿ ನೀಡಿ ತಪಾಸಣೆ ನಡೆಸಲಿವೆ. ಇದಲ್ಲದೆ ತಾಲೂಕು ಮಟ್ಟದಲ್ಲಿ ಸಹ ವಿಶೇಷ ಸ್ಕ್ವಾಡ್ ರಚಿಸುವ ಚಿಂತನೆ ನಡೆಸಲಾಗಿದೆ ಎಂದರು.
ಕಳೆದ ವರ್ಷ ಪಿಯುಸಿಯಲ್ಲಿ ಜಿಲ್ಲೆ 6ನೇ ಸ್ಥಾನ ಪಡೆದಿತ್ತು. ಅದನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಉಪನ್ಯಾಸಕರಿಗೆ ಸೂಚನೆ
ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದಾರೆ. ನಿರೀಕ್ಷೆಗಿಂತ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳು ಅನಗತ್ಯ ಮಾನಸಿಕ ಗೊಂದಲಕ್ಕೆ ಸಿಲುಕದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪಪೂ ಕಾಲೇಜುಗಳ ಅಭಿವೃದ್ಧಿಗೆ ಅಗತ್ಯ ನಿಗಾ ವಹಿಸಲಾಗಿದೆ. ನಾನು ಉಪನಿರ್ದೇಶಕನಾಗಿ ನೇಮಕವಾದ ತಕ್ಷಣ ಜಿಲ್ಲೆಯ ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿ ಉಪನ್ಯಾಸಕರ ಕಾರ್ಯವೈಖರಿಯನ್ನು ಪರಿಶೀಲಿಸುವ ಕೆಲಸ ಮಾಡಿದ್ದೇನೆ. ಹಿಂದೆ ಉಪನ್ಯಾಸಕರು ಕಾಲೇಜಿನಿಂದ ಹೊರಗೆ ಇರುತ್ತಿದ್ದರು. ಈಗ ಅಂತಹ ಯಾವುದೇ ದೂರುಗಳು ಇಲ್ಲ. ನಿಷ್ಠೆಯಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಲೋಕೇಶ್, ಉಪನ್ಯಾಸಕರಾದ ಜಗದೀಶ್, ಕೆ.ಚಿದಂಬರ, ಬಸವರಾಜ್ ಇನ್ನಿತರರು ಇದ್ದರು.