Advertisement

ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಣ್ಗಾವಲು

11:17 PM Aug 03, 2019 | mahesh |

ಬಂಟ್ವಾಳ: ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸುವ ದೃಷ್ಟಿಯಿಂದ ಪೊಲೀಸ್‌ ಇಲಾಖೆಯು ತಾ|ನ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕಾರ್ಯಕ್ಕೆ ಮುಂದಡಿಯಿಟ್ಟಿದೆ.

Advertisement

ಈಗಾಗಲೇ ತಾಲೂಕಿನ ಬಿ.ಸಿ. ರೋಡ್‌, ಫರಂಗಿಪೇಟೆ, ಸಾಲೆತ್ತೂರು, ವಿಟ್ಲ, ಕಲ್ಲಡ್ಕ ಮೊದಲಾದೆಡೆ ಸಿಸಿ ಕೆಮರಾ ಅಳವಡಿಸ ಲಾಗಿದೆ. ಬಿ.ಸಿ. ರೋಡ್‌ನ‌ಲ್ಲಿ ವಾಹನ ದಟ್ಟನೆ ಹೆಚ್ಚಳವಾಗಿದ್ದು, ಪೊಲೀಸ್‌ ಇಲಾಖೆ ಎಷ್ಟೇ ಎಚ್ಚರಿಕೆ ವಹಿಸಿದರೂ ನಿಯಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತವೆ. ಆದುದರಿಂದ ಇಲಾಖೆ ಸಿಸಿ ಕೆಮರಾ ಅಳವಡಿಸಿದೆ.

ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಮಾದರಿಯಲ್ಲಿ ಸಂಚಾರ ನಿಯಮ ಉಲ್ಲಂ ಘಿಸಿದರೆ ನೇರವಾಗಿ ದಂಡ ಪಾವತಿಗಾಗಿ ಮನೆಗೆ ನೋಟಿಸ್‌ ಕಳುಹಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನು ಪರಿಣಾಮ ಕಾರಿಯಾಗಿ ತರುವ ನಿಟ್ಟಿನಲ್ಲಿ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗುತ್ತದೆ ಎಂದು ಬಂಟ್ವಾಳ ಸಿಪಿಐ ಟಿ.ಡಿ. ನಾಗರಾಜು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next