Advertisement

ಅಪರಾಧಗಳ ಕಡಿವಾಣಕ್ಕೆ ಸಿಸಿ ಕ್ಯಾಮೆರಾ ಹದ್ದಿನ ಕಣ್ಣು

01:23 PM Feb 24, 2021 | Team Udayavani |

ಭಾರತೀನಗರ: ಅಪರಾಧ ಪ್ರಕರಣಗಳ ತಡೆಗೆ ಮದ್ದೂರಿನ ಕೆ.ಎಂ.ದೊಡ್ಡಿ ಪಟ್ಟಣದಲ್ಲಿ ಸಿಸಿ ಕ್ಯಾಮೆ ರಾವನ್ನು ಪೊಲೀಸರು ಅಳಡಿಸಿದ್ದಾರೆ. ಆರೋಪಿಗಳ ಪತ್ತೆ ಹಾಗೂ ಅಪರಾಧ ಪ್ರಕರಣಗಳ ತಡೆಗೆ ಕಡಿ ವಾಣ ಹಾಕಲು ಪೊಲೀಸ್‌ ಇಲಾಖೆ ಮುಂದಾಗಿದೆ.

Advertisement

ಕೆ.ಎಂ.ದೊಡ್ಡಿಯ ಪೊಲೀಸ್‌ ಠಾಣೆಯಿಂದ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರ ಸಹಾಯ ದಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇಅಪರಾಧ ಪ್ರಕರಣಗಳು ನಡೆದರೂ, ಇದರಿಂದತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆ.ಎಂ.ದೊಡ್ಡಿ ಪೊಲೀಸರು ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.ಅಪರಾಧ ಚಟುವಟಿಕೆ ಕಡಿಮೆ: ಸಿಸಿ ಕ್ಯಾಮೆರಅಳವಡಿಸಿರುವುದರಿಂದ ಗ್ರಾಮಸ್ಥರಲ್ಲಿ ಈಗ ನೆಮ್ಮದಿ ಮೂಡಿದೆ. ಗ್ರಾಮಗಳಲ್ಲಿ ಅಪರಾಧ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಪೊಲೀಸರ ಕಾರ್ಯಕ್ಕೆ ವರ್ತಕರ ಸಂಘ, ರೈತ ಸಂಘ, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಂತಹ ವಿನೂತನ ಕಾರ್ಯಕ್ಕೆ ಮುಂದಾದ ಎಸ್‌ಪಿ ಪರಶು ರಾಮ್‌, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶಿವಮಲವಯ್ಯ, ಸಬ್‌ಇನ್ಸ್‌ ಪೆಕ್ಟರ್‌ ಶೇಷಾದ್ರಿ ಅವರನ್ನು ಅಭಿನಂದಿಸಿದರು. ಅಪರಾಧಿಗಳು ತಪ್ಪಿಸಿಕೊಳ್ಳಲು ಅಸಾಧ್ಯ: ಎಸ್‌ಪಿಕೆ.ಪರಶುರಾಮ ಅನಾವರಣಗೊಳಿಸಿ ಮಾತನಾಡಿ, ಕೆ.ಎಂ.ದೊಡ್ಡಿ ಪಟ್ಟಣ ಕೇಂದ್ರವಾಗಿದ್ದು, ಹತ್ತಾರುವಿದ್ಯಾಸಂಸ್ಥೆಗಳಿದೆ. ಸಾವಿರಾರು ವಿದ್ಯಾರ್ಥಿಗಳುವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಿದ್ದಾರೆ. ಜೊತೆಗೆ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಅಪರಾಧತಡೆಗೆ ಸಿಸಿ ಕ್ಯಾಮೆರಾಪೂರಕವಾಗಿದೆ. ಶ್ರೀಚಾಮುಂ ಡೇಶ್ವರಿ ಸಕ್ಕರೆ ಕಾರ್ಖಾನೆಇರುವುದರಿಂದ ನಿತ್ಯ ಎತ್ತಿನಗಾಡಿಗಳು, ಲಾರಿ, ಟ್ರ್ಯಾಕ್ಟರ್‌ಗಳು ಅಡ್ಡಾದಿಡ್ಡಿಸಂಚಾರ ಮಾಡಿ, ಅಪಘಾತವಾದರೂ ಮಾಹಿತಿಲಭ್ಯವಾಗದೆ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದರು.ಈ ಅದು ಸಾಧ್ಯವಿಲ್ಲ. ಮನೆ ಮುಂಭಾಗ ಸಿಸಿಕ್ಯಾಮೆರಾ ಅಳವಡಿಸಿದರೆ ಯಾವುದೇ ಅಪರಾಧ ನಡೆಯಲು ಅಸಾಧ್ಯ ಎಂದು ತಿಳಿಸಿದರು.

ಸಿಸಿ ಕ್ಯಾಮೆರಾ ಅಳವಡಿಕೆಗೆ ನೆರವಾದ ವರ್ತಕ ಸಂಘದ ಅಧ್ಯಕ್ಷ ಕೆಂಪಣ್ಣ, ರಂಗೋಲಿ ರವಿ, ಸಜನ್‌, ಮನೋಜ್‌ ಅವರನ್ನು ಅಭಿನಂದಿಸಲಾಯಿತು.

ಸಿಸಿ ಕ್ಯಾಮೆರಾ ಅಳವಡಿಸಿ ಆರೋಪಿಗಳ ಪತ್ತೆ, ಅಪರಾಧ ತಡೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ. ಇದಕ್ಕೆಸಾರ್ವಜನಿಕರು ಸಹಕಾರ ನೀಡಬೇಕು. ಲಕ್ಷ್ಮೀನಾರಾಯಣ ಪ್ರಸಾದ್‌, ಡಿವೈಎಸ್‌ಪಿ

Advertisement

ಆಯಾ ಗ್ರಾಪಂ, ಸಾರ್ವಜನಿಕರಸಹಕಾರದಿಂದ ಜಿಲ್ಲೆ ಗಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.ಇದಕ್ಕೆ ಸರ್ಕಾರದ ಹಣ ಪಡೆದಿಲ್ಲ. ಈಗಾಗಲೇ ಕೆ.ಆರ್‌.ಪೇಟೆ, ಮದ್ದೂರಿಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಗಡಿ ಗ್ರಾಮಗಳಲ್ಲಿ ಅಳವಡಿಕೆಗೆ ಸಹಕಾರ ಬೇಕಿದೆ. ಕೆ.ಪರಶುರಾಮ, ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next