Advertisement

ಯಂಗ್‌ ವಾರಿಯರ್‌ ಅಭಿಯಾನ : ಕೊರೊನಾ ವಿರುದ್ಧ ಸಿಬಿಎಸ್‌ಇ ಹೊಸ ಉಪಕ್ರಮ

01:34 AM May 22, 2021 | Team Udayavani |

ಹೊಸದಿಲ್ಲಿ : ದೇಶದಲ್ಲಿ ಕೋವಿಡ್‌ ವಿರುದ್ಧ ಹೋರಾಡುವ ಯುವ ಪಡೆಯೊಂದನ್ನು ರೂಪಿಸಲು ಸಿಬಿಎಸ್‌ಇಯು “ಯಂಗ್‌ ವಾರಿಯರ್‌’ ಅಭಿಯಾನ ಆರಂಭಿಸಿದೆ. ಲಕ್ಷಾಂತರ ಯುವ ಸೇನಾನಿಗಳ ಪಡೆಯನ್ನು ಸೃಷ್ಟಿಸುವ ಪ್ರಯತ್ನ ಸಿಬಿಎಸ್‌ಇಯದು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಯುನಿಸೆಫ್ನ ಯುವಾಹ್‌ ಈ ಅಭಿಯಾನದ ಪಾಲುದಾರ ರು. 50 ಲಕ್ಷ ಯುವಜನರನ್ನು ಇದರಲ್ಲಿ ಸೇರಿಸಿ ಕೊಂಡು 5 ಕೋಟಿ ಮಂದಿಯ ಮೇಲೆ ಪರಿಣಾಮ ಬೀರುವ ಗುರಿ ಹಾಕಿಕೊಳ್ಳಲಾಗಿದೆ.

Advertisement

10ರಿಂದ 30 ವಯಸ್ಸಿನ ವಿದ್ಯಾರ್ಥಿಗಳು, ಶಿಕ್ಷಕರು ಇದರಲ್ಲಿ ಸೇರಿಕೊಳ್ಳಬಹುದು. ಈ ಯುವ ಸೇನಾನಿಗಳು ಜನರಿಗೆ ಆರೋಗ್ಯ ಮತ್ತು ಅಗತ್ಯ ಸೇವೆಗಳ ಬಗ್ಗೆ ಮಾಹಿತಿ, ಲಸಿಕೆ ನೋಂದಣಿ, ಕೋವಿಡ್‌ ಸುರಕ್ಷಾ ಕ್ರಮಗಳ ಮಾಹಿತಿ, ಸರಿಯಾದ ವೈದ್ಯಕೀಯ ಮಾಹಿತಿ ಒದಗಣೆ ಇತ್ಯಾದಿ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಬೇಕಿದೆ.

ಸೇರ್ಪಡೆ ಹೇಗೆ?
– ವಾಟ್ಸ್‌ಆ್ಯಪ್‌: ವೈಡಬ್ಲ್ಯುಎ ಎಂದು ಟೈಪ್‌ ಮಾಡಿ +91 9650414141ಗೆ ಕಳುಹಿಸಿ ಅಥವಾ 080-66019225ಗೆ ಮಿಸ್‌ಕಾಲ್‌ ಕೊಡಿ.
– ತಾವು ಸೇರ್ಪಡೆಯಾದ ಬಳಿಕ 10-30 ವಯೋ ಮಾನದ 10 ಮಂದಿಗೆ ಅಭಿಯಾನಕ್ಕೆ ಸೇರಿಕೊಳ್ಳಲು ಪ್ರೋತ್ಸಾಹಿಸಿ.
– ಸಾಮಾಜಿಕ ಮಾಧ್ಯಮಗಳಲ್ಲಿ 5 ಮಂದಿ ಗೆಳೆಯ ರನ್ನು ಟ್ಯಾಗ್‌ ಮಾಡಿ “ಐ ಆ್ಯಮ್‌ ಎ #ಯಂಗ್‌ ವಾರಿಯರ್‌’ ಎಂದು ಬರೆದು ಕೊಳ್ಳುವ ಮೂಲಕ ಕೋವಿಡ್‌ ವಿರುದ್ಧ ಹೋರಾಡುವ ಶಪಥ ಮಾಡಬೇಕು.
– ಟಾಸ್ಕ್ಗಳನ್ನು ಪೂರೈಸಿದ ಬಳಿಕ ಅಭ್ಯರ್ಥಿ ಗಳಿಗೆ ಯುನಿಸೆಫ್ ಪ್ರಮಾಣಪತ್ರ ಲಭಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next