Advertisement

50:50 ಅನುಪಾತ ಕೈಬಿಡಲಿರುವ ಸಿಬಿಎಸ್‌ಇ; 30:70 ಅನುಪಾತದಲ್ಲಿ ಕ್ರೋಢೀಕರಿಸಲು ಚಿಂತನೆ

09:22 PM Apr 05, 2022 | Team Udayavani |

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಮೊದಲ ಮತ್ತು ಎರಡನೇ ಟರ್ಮ್ ಪರೀಕ್ಷೆಯ ಫ‌ಲಿತಾಂಶ ಕ್ರೋಢೀಕರಣದ ಅನುಪಾತ ಬದಲಾವಣೆಗೆ ಮುಂದಾಗಿದೆ.

Advertisement

ಈ ಹಿಂದೆ ತಿಳಿಸಿದಂತೆ ಎರಡೂ ಟರ್ಮ್ ಗಳ ಫ‌ಲಿತಾಂಶವನ್ನು 50:50 ಅನುಪಾತದಲ್ಲಿ ಕ್ರೋಢೀಕರಿಸುವ ಬದಲು 30:70 ಅನುಪಾತದಲ್ಲಿ ಕ್ರೋಢೀಕರಿಸಲು ಚಿಂತನೆ ನಡೆಸಲಾಗಿದೆ.

ಇದನ್ನೂ ಓದಿ:ಒಂದೇ ದಿನದಲ್ಲಿ ಬದಲಾವಣೆ ; ಬಿಎಸ್‌ವೈಗೆ ಕೊಕ್, ಬೊಮ್ಮಾಯಿಗೆ ಸ್ಥಾನ!

ಈ ಬಗ್ಗೆ ಶೀಘ್ರವೇ ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವುದಾಗಿಯೂ ತಿಳಿಸಲಾಗಿದೆ.

ವಿಸ್ತರಣೆ: ಇದೇ ವೇಳೆ 2022ರಲ್ಲಿ ಪ್ರಕಟವಾದ ಮೊದಲ ಟರ್ಮ್ ಗಳ ಫ‌ಲಿತಾಂಶದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸಮಯಾವಕಾಶವನ್ನು ಏ.20ರವರೆಗೆ ವಿಸ್ತರಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next