Advertisement

ಇಂದು ಸಿಬಿಎಸ್‌ಇ ಹತ್ತನೇ ತರಗತಿ ಫ‌ಲಿತಾಂಶ?

03:25 AM May 05, 2019 | Team Udayavani |

ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) ಫೆಬ್ರವರಿ/ಮಾರ್ಚ್‌ನಲ್ಲಿ ನಡೆಸಿದ ಹತ್ತನೇ ತರಗತಿ ಪರೀಕ್ಷೆಯ ಫ‌ಲಿತಾಂಶ ಮೇ 5ರಂದು ಪ್ರಕಟವಾಗುವ ಸಾಧ್ಯತೆ ಇದೆ. 2019ರ ಫೆ. 2ರಿಂದ ಮಾ. 29ರ ವರೆಗೆ ನಡೆದ ಹತ್ತನೇ ತರಗತಿ ಪರೀಕ್ಷೆಗೆ ಸುಮಾರು 27 ಲಕ್ಷ ವಿದ್ಯಾರ್ಥಿಗಳು ದೇಶಾದ್ಯಂತ ನೋಂದಣಿ ಮಾಡಿಕೊಂಡಿದ್ದರು. ಎಲ್ಲ ವಿದ್ಯಾರ್ಥಿಗಳ ಮೌಲ್ಯಮಾಪನ ಕಾರ್ಯ ಮುಗಿದಿದೆ. ಫ‌ಲಿತಾಂಶವು ಸಿಬಿಎಸ್‌ಇ ಅಧಿಕೃತ //cbseresults.nic.in ಅಥವಾ //cbse.nic.in ನಲ್ಲಿ ಲಭ್ಯವಿರಲಿದೆ. ನೀಟ್‌ ಪರೀಕ್ಷೆ ಕೂಡ ರವಿವಾರ ನಡೆಯಲಿರುವುದರಿಂದ ಕೊನೆಯ ಕ್ಷಣದಲ್ಲಿ ಸಿಬಿಎಸ್‌ಇ ಮಂಡಳಿ ಫ‌ಲಿತಾಂಶದ ದಿನಾಂಕವನ್ನು ಮುಂದೂಡುವ ಸಾಧ್ಯತೆಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next