Advertisement
25 ಮಂದಿಯ ವಿಚಾರಣೆ: ಇದೇ ವೇಳೆ, ತರಗತಿಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ನವದಿಲ್ಲಿ ಪೊಲೀಸರು ಕೋಚಿಂಗ್ ಸೆಂಟರ್ ಮುಖ್ಯಸ್ಥ ಸೇರಿದಂತೆ 25 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಜತೆಗೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇದೇ ವೇಳೆ ಸಿಬಿಎಸ್.ಇ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಬಗ್ಗೆ ಸುಳಿವು ಇದುವರೆಗೆ ಸಿಕ್ಕಿಲ್ಲ ಎಂದಿದ್ದಾರೆ ಪೊಲೀಸರು.
ಜಾವಡೇಕರ್ ವಜಾ ಮಾಡಿ: ಪ್ರಕರಣದ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಅಧ್ಯಕ್ಷೆಯನ್ನು ಹಾಗೂ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರನ್ನು ವಜಾ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ‘ಪರೀಕ್ಷಾ ಮಾಫಿಯಾ’ಕ್ಕೆ ಉತ್ತೇಜನ ಸಿಗುತ್ತಿದೆ ಎಂದು ಅವರು ದೂರಿದ್ದಾರೆ. ‘ಚೌಕಿದಾರ ದುರ್ಬಲರಾಗಿದ್ದಾರೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ’ ಎಂದು ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
Related Articles
Advertisement
ಏ.1ರಂದು ಹೊಸ ದಿನಾಂಕ?ಮರುಪರೀಕ್ಷೆ ದಿನಾಂಕಗಳನ್ನು ಸಿಬಿಎಸ್.ಇ ಸೋಮವಾರ ಅಥವಾ ಮಂಗಳವಾರ ಪ್ರಕಟ ಮಾಡಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಇದರ ಜತೆಗೆ ಕೆಲವೊಂದು ಹೊಸ ಕ್ರಮಗಳನ್ನೂ ಘೋಷಣೆ ಮಾಡಲಿದೆ ಎಂದು ಹೇಳಿದ್ದಾರೆ. ಈ ಘಟನೆ ನಿಜಕ್ಕೂ ದುರದೃಷ್ಟಕರ. ವಿದ್ಯಾರ್ಥಿಗಳು, ಹೆತ್ತವರ ಆತಂಕ ತಮಗೆ ಅರ್ಥವಾಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ. ಚೌಕೀದಾರ ದುರ್ಬಲ: ರಾಹುಲ್
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಲವು ಪ್ರಕರಣಗಳಿಗೆ ಸೇರ್ಪಡೆಯಾಗಿದೆ. ಆದರೆ ಚೌಕಿದಾರ (ಪ್ರಧಾನಿ ನರೇಂದ್ರ ಮೋದಿ) ದುರ್ಬಲರಾಗಿದ್ದಾರೆ ಎಂದು ಛೇಡಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ಆದರೆ ರಾಹುಲ್ ಆರೋಪವನ್ನು ಬಿಜೆಪಿ ತಿರಸ್ಕರಿಸಿದ್ದು, ‘ರಾಹುಲ್ ಗಾಂಧಿ ಯುಪಿಎ ಕಾಲದ ಹಗರಣಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದೆ. – 18 ವಿದ್ಯಾರ್ಥಿಗಳನ್ನೂ ಪ್ರಶ್ನಿಸಿದ ಪೊಲೀಸರು
– ದಿಲ್ಲಿಯ ಪದವಿ ವಿದ್ಯಾರ್ಥಿ ನೇತೃತ್ವದ ಕೋಚಿಂಗ್ ಸೆಂಟರ್
ಮಂಡಳಿ ಮುಖ್ಯಸ್ಥೆ ಹಾಗೂ ಸಚಿವ ಜಾವಡೇಕರ್ ವಜಾಕ್ಕೆ ಕಾಂಗ್ರೆಸ್ ಒತ್ತಾಯ
– ಪ್ರಧಾನಿ ಮೋದಿ ಸರಕಾರದ ಅವಧಿಯಲ್ಲಿ ‘ಪರೀಕ್ಷಾ