ನವದೆಹಲಿ: ಹತ್ತು ಮತ್ತು ಹನ್ನೆರಡನೇ ತರಗತಿಗಳ ಪರೀಕ್ಷೆಯ ವೇಳಾಪಟ್ಟಿ ನಿಗದಿ ಮಾಡಲಾಗಿಲ್ಲ. ದಿನಾಂಕಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅಂಶ ಸುಳ್ಳು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶುಕ್ರವಾರ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮಂಡಳಿ “ಮಾರ್ಚ್‌ನಲ್ಲಿ 10, 12ನೇ ತರಗತಿ ಪರೀಕ್ಷೆಗಳು ನಡೆಯಲಿವೆ ಎಂಬ ಮಾಹಿತಿಯಲ್ಲಿ ಸತ್ಯಾಂಶವಿಲ್ಲ. ವಿದ್ಯಾರ್ಥಿಗಳು ಹೊಂದಿರುವ ಆತಂಕ ನಮಗೆ ಅರ್ಥವಾಗುತ್ತದೆ. ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸುವ ಮುನ್ನ ಸಂಬಂಧಿತರ ಜತೆಗೆ ಚರ್ಚೆ ನಡೆಸಿಯೇ ತೀರ್ಮಾನಿಸಲಾಗುತ್ತದೆ. ಈ ಬಗ್ಗೆ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಗಳನ್ನು ನಂಬಬೇಡಿ.
ಇದನ್ನೂ ಓದಿ:ಭಕ್ತರ ಮನೆಗೆ ಪ್ರಸಾದ ತಲುಪಿಸುವ ಭರವಸೆ : ನಕಲಿ ವೆಬ್ ಸೈಟ್ ವಿರುದ್ಧ ಟಿಟಿಡಿ ದೂರು
ಸಿಬಿಎಸ್‌ಇ ವೈಬ್‌ಸೈಟ್‌ನಲ್ಲಿ ಪರೀಕ್ಷೆಯ ಮತ್ತು ಇತರ ನಿರ್ಧಾರಗಳ ಬಗ್ಗೆ ಪ್ರಕಟಿಸಲಾಗುತ್ತದೆ’ ಎಂದು ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ವೆಬಿನಾರ್ ಒಂದರಲ್ಲಿ ಮಾತನಾಡಿದ್ದ ವೇಳೆ, ಪರೀಕ್ಷೆಗಳು ವಿಳಂಬವಾಗಲಿವೆ ಎಂದು ಹೇಳಿದ್ದರು.