Advertisement

ಪ್ರಜಾಪ್ರಭುತ್ವ ಮತ್ತು ವಿವಿಧತೆ ಅಧ್ಯಾಯವನ್ನೇ ಕೈಬಿಟ್ಟ ಸಿಬಿಎಸ್‌ಇ!

12:50 AM Apr 24, 2022 | Team Udayavani |

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು(ಸಿಬಿಎಸ್‌ಇ) 10, 11 ಮತ್ತು 12ನೇ ತರಗತಿಯ ಪಠ್ಯದಿಂದ ಹಲವು ಪ್ರಮುಖ ಅಂಶಗಳನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ಕೋರ್ಸ್‌ ಕಂಟೆಂಟ್‌ ಪಠ್ಯದಿಂದ “ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ’ ಎಂಬ ಅಧ್ಯಾಯವನ್ನೇ ಕೈಬಿಡಲಾಗಿದೆ. 11 ಮತ್ತು 12ನೇ ತರಗತಿಯ ಇತಿಹಾಸ ಮತ್ತು ರಾಜ್ಯಶಾಸ್ತ್ರ ಪಠ್ಯದಲ್ಲಿದ್ದ ಅಲಿಪ್ತ ಚಳವಳಿ, ಶೀತಲ ಸಮರದ ಯುಗ, ಆಫ್ರಿಕಾ-ಏಷ್ಯಾ ಪ್ರಾಂತ್ಯಗಳಲ್ಲಿ ಇಸ್ಲಾಂ ಸಾಮ್ರಾಜ್ಯಗಳ ಉಗಮ ಹಾಗೂ ವಿಸ್ತರಣೆ, ಮೊಘಲರ ಕೋರ್ಟ್‌ಗಳ ವೃತ್ತಾಂತಗಳು, ಕೈಗಾರಿಕಾ ಕ್ರಾಂತಿಯ ಪಾಠಗಳಿಗೆ ಕೊಕ್‌ ಕೊಡಲಾಗಿದೆ.

ಅದೇ ರೀತಿ, 10ನೇ ತರಗತಿಯ ಪಠ್ಯಕ್ರಮದಿಂದ “ಆಹಾರ ಭದ್ರತೆ’ಯಲ್ಲಿ ಬರುವ “ಕೃಷಿಯ ಮೇಲೆ ಜಾಗತೀಕರಣದ ಪ್ರಭಾವ’ ಎಂಬ ಅಧ್ಯಾಯವನ್ನೂ ಕೈಬಿಡಲಾಗಿದೆ.

ಇದನ್ನೂ ಓದಿ:ಸೆ.23,24 ಮತ್ತು 25 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಫೈಜ್‌ ಅಹ್ಮದ್‌ ಫೈಜ್‌ ಅವರ ಎರಡು ಉರ್ದು ಕವಿತೆಗಳ ಭಾಷಾಂತರವನ್ನೂ ತೆಗೆದುಹಾಕಲಾಗಿದೆ.

Advertisement

ಕೈಬಿಡಲಾದ ಪಠ್ಯಗಳ ಆಯ್ಕೆಯ ಹಿಂದಿನ ಮಾನದಂಡವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿಗಳು, “ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಉದ್ದೇಶದಿಂದ ಹಾಗೂ ಎನ್‌ಸಿಇಆರ್‌ಟಿ ಶಿಫಾರಸು ಮೇರೆಗೆ ಈ ಬದಲಾವಣೆಗಳನ್ನು ಮಾಡಲಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next