Advertisement

10ನೇ ತರಗತಿ ಪಠ್ಯಕ್ರಮದಿಂದ 5 ಅಧ್ಯಾಯ ಕೈಬಿಟ್ಟ ಸಿಬಿಎಸ್‌ಇ

04:31 AM Apr 18, 2019 | Team Udayavani |

ಹೊಸದಿಲ್ಲಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಪಠ್ಯಕ್ರಮದಿಂದ 5 ಸಮಾಜ ವಿಜ್ಞಾನ ಅಧ್ಯಾಯಗಳನ್ನು ಕೈಬಿಡಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ. 5 ಅಧ್ಯಾಯಗಳ ಪೈಕಿ ರಾಜಕೀಯ ಅಧ್ಯಯನಕ್ಕೆ ಸಂಬಂಧಿಸಿದ 3 ಮತ್ತು ಪರಿಸರಕ್ಕೆ ಸಂಬಂಧಿಸಿ 2 ಅಧ್ಯಾಯಗಳು ಇದ್ದು, ಇವುಗಳ ಕೇವಲ ಆಂತರಿಕ ಮೌಲ್ಯಮಾಪನದ ಭಾಗವಾಗಿರುತ್ತದೆ. ಆದರೆ ಅಂತಿಮ ಪರೀಕ್ಷೆಯಲ್ಲಿ ಒಳಗೊಂಡಿರುವುದಿಲ್ಲ ಎಂದು ಸಿಬಿಎಸ್‌ಇ ಹೇಳಿದೆ.

Advertisement

“ಪ್ರಜಾಪ್ರಭುತ್ವದ ಸವಾಲುಗಳು’, “ಪ್ರಜಾಸತ್ತೆ ಮತ್ತು ವೈವಿಧ್ಯತೆ’, “ರಾಜಕೀಯ ಹೋರಾಟ ಗಳು ಮತ್ತು ಚಳವಳಿಗಳು’, “ಅರಣ್ಯ ಮತ್ತು ವನ್ಯಜೀವಿಗಳು’, “ಜಲ ಸಂಪನ್ಮೂಲಗಳು’ ಅಧ್ಯಾಯಗಳನ್ನು ಸಿಬಿಎಸ್‌ಇ ಕೈಬಿಟ್ಟಿದೆ. ಶಾಲೆಗಳಿಗೆ ಕಳುಹಿಸಲಾದ ಪಠ್ಯಕ್ರಮಗಳ ಜತೆಗೆ ಈ ಕುರಿತ ಟಿಪ್ಪಣಿಯನ್ನೂ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next