Advertisement

ಸಿಬಿಎಸ್ಇ 10 ಮತ್ತು 12ನೇ ತರಗತಿ ವೇಳಾಪಟ್ಟಿ ಪ್ರಕಟ: ಫೆಬ್ರವರಿ 15ರಿಂದ ಪರೀಕ್ಷೆ ಆರಂಭ

09:44 AM Dec 19, 2019 | Mithun PG |

ನವದೆಹಲಿ: ಕೇಂದ್ರೀಯ ಫ್ರೌಡಶಿಕ್ಷಣ ಮಂಡಳಿ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2020 ರ ಫೆಬ್ರವರಿ 15 ರಿಂದ ಆರಂಭವಾಗಲಿದೆ. ಈಗಾಗಲೇ ಪರೀಕ್ಷಾ ಮಂಡಳಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟನೆಯನ್ನು ಹೊರಡಿಸಿದೆ.

Advertisement

12ನೇ ತರಗತಿ ಪರೀಕ್ಷೆಗಳು ಮಾರ್ಚ್ 30 ರಂದು ಮತ್ತು 10 ನೇ ತರಗತಿ ಪರೀಕ್ಷೆಗಳು ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದೆ ಎಂದು ಮಂಡಳಿ ಮಂಗಳವಾರ ತಿಳಿಸಿದೆ.

ಸಿಬಿಎಸ್ ಇ ಪ್ರಾಯೋಗಿಕ ಪರೀಕ್ಷೆಗಳ(ಪ್ರ್ಯಾಕ್ಟಿಕಲ್ಸ್) ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು, ಆಯಾ ಶಾಲೆಗಳಲ್ಲಿ 2020ರ ಜನವರಿ 1ರಿಂದ ಫೆಬ್ರವರಿ 7 ರವರೆಗೂ ನಡೆಯಲಿದೆ.

ಈ ಬಾರಿ 3 ಮಿಲಿಯನ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ  ಎಂದು ಮಂಡಳಿ ತಿಳಿಸಿದೆ.

ವಿದ್ಯಾರ್ಥಿಗಳು ಸಿಬಿಎಸ್​ಇ ವೆಬ್​ಸೈಟ್​​ cbse.nic.in.ಗೆ ಭೇಟಿ ನೀಡಿ ಪರೀಕ್ಷಾ ವೇಳಾಪಟ್ಟಿಯನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

Advertisement

10ನೇ ತರಗತಿ ಪರೀಕ್ಷಾ ವೇಳಾಪಟ್ಟಿ

12ನೇ ತರಗತಿ ಪರೀಕ್ಷಾ ವೇಳಾಪಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next