ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಶುಕ್ರವಾರ 12ನೇ ತರಗತಿಯ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಶೇಕಡಾ 87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಿಬಿಎಸ್ಇಯ 10 ನೇ ತರಗತಿ ಬೋರ್ಡ್ ಪರೀಕ್ಷೆಯು ಫೆಬ್ರವರಿ 15ರಿಂದ ಮಾರ್ಚ್ 21 ರವರೆಗೆ ನಡೆದಿದ್ದರೆ, 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದಿತ್ತು.
ಈ ವರ್ಷದ ಜನವರಿ 2 14 ರ ನಡುವೆ 10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್ಇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿತ್ತು.
ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ನಿಟ್ಟಿನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಅಥವಾ ಮೂರನೇ ಡಿವಿಶನ್ ಗಳನ್ನು ನೀಡುವುದಿಲ್ಲ ಎಂದು ಮಂಡಳಿ ಹೇಳಿದೆ. ಆದರೆ ಹೆಚ್ಚಿನ ಅಂಕಗಳನ್ನು ಗಳಿಸಿದ 0.1 ಪ್ರತಿಶತ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡುತ್ತದೆ.
Related Articles
ಅತ್ಯುತ್ತಮ ಉತ್ತೀರ್ಣ ಶೇಕಡಾವಾರು ಪ್ರದೇಶ ತಿರುವನಂತಪುರವಾಗಿದ್ದು, ಇಲ್ಲಿ ಶೇಕಡಾ 99.91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 78.05 ರಷ್ಟು ಫಲಿತಾಂಶ ಪಡೆದ ಪ್ರಯಾಗ್ ರಾಜ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಾದ //cbse.nic.in ಮತ್ತು //cbse.gov.in ನಲ್ಲಿ ಪೋಸ್ಟ್ ಮಾಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಫಲಿತಾಂಶಗವನ್ನು ನೋಡಬಹುದು.