ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ(ಸಿಬಿಎಸ್‌ಇ) 12ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕವನ್ನು ಒಳಗೊಂಡ ಚೆನ್ನೈ ವಿಭಾಗದಿ ಂದ ಪರೀಕ್ಷೆ ಬರೆದಿದ್ದ 56,728 ವಿದ್ಯಾರ್ಥಿಗಳಲ್ಲಿ 29,294 ಹುಡುಗರು, 23,261 ಹುಡುಗಿಯರು ಸೇರಿ 52,555 ಮಂದಿ ತೇರ್ಗಡೆ ಹೊಂದಿದ್ದು, ಶೇ.92.64ರಷ್ಟು ಫಲಿತಾಂಶ ಬಂದಿದೆ.
ರಾಜಧಾನಿಯ ಡಿಆರ್‌ಡಿಓ ಕೇಂದ್ರೀಯ ವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜಾಸ್ಮಿನ್ ಜೆರ್ರಿ ಎ. 492 ಅಂಕ (ಶೇ.98.4) ಗಳಿಸಿದ್ದಾಳೆ. ಕುಮಾರನ್ಸ್ ಶಾಲೆಯ ರುದ್ರಪಟ್ಟಣ ವಲ್ಲಭ ರಮಾಕಾಂತ್ ಶೇ.98.2ರಷ್ಟು, ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳಾದ ವೆಂಕಟ್ ಆದಿತ್ಯ ಮತ್ತು ಜಯಂತ್ ಎಸ್. ಪ್ರಸಾದ್ ತಲಾ ಶೇ.98 ರಷ್ಟು,
ಡೆಲ್ಲಿ ಪಬ್ಲಿಕ್ ಸ್ಕೂಲ್ (ಪೂರ್ವ)ನ ಶೃತಿ ಪರಾಗ್ ಲಾಂಡೆY ಶೇ. 97.6ರಷ್ಟು ಮತ್ತು ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರಾಹುಲ್ ಎನ್. ಶಾನುಭೋಗ್ ಶೇ.97, ಅನುಷಾ ಗುಪ್ತಾ ಶೇ.96.2, ಅದಿತ್ಯ ಸುಂದರರಾಜನ್ ಹಾಗೂ ರಾಗಿಣಿ ತಲಾ ಶೇ.96ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶ್ವೇತಾ ಶೇ.95.6ರಷ್ಟು ಅಂಕ ಪಡೆದಿದ್ದಾರೆ. ವಿಭಾಗವಾರು ಫಲಿತಾಂಶದಲ್ಲಿ ತಿರುವನಂತಪುರ ಶೇ.95.64ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದೆ. ಚೆನ್ನೈ ಎರಡನೇ ಸ್ಥಾನ ಪಡೆದಿದೆ. ಉಳಿದಂತೆ ಅಮ್ಮಿàರ್ ಶೇ.84.69ರಷ್ಟು, ಭುವನೇಶ್ವರ ಶೇ.73.43ರಷ್ಟು,
ಪಂಚಕುಲ ಶೇ.83.58ರಷ್ಟು, ದೆಹಲಿ ಶೇ.88.37ರಷ್ಟು, ಗೌಹಟಿ ಶೇ.65.31ರಷ್ಟು, ಪಾಟ್ನಾ ಶೇ.72.04ರಷ್ಟು, ಅಲಹಾಬಾದ್ ಶೇ.75.52ರಷ್ಟು ಹಾಗೂ ಡೆಹರಾಡೂನ್ ಶೇ.73.69ರಷ್ಟು ಫಲಿತಾಂಶ ಪಡೆದಿದೆ. ಚೆನ್ನೈ ವಿಭಾಗದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಪಾಂಡಿಚೇರಿ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಡೀವ್ ಮತ್ತು ದಮನ್ ಸೇರಿಕೊಂಡಿದೆ.