Advertisement
ಏನೇನು ಬದಲಾವಣೆ? :
- ಎಲ್ಲ ವಿಷಯಗಳಿಗೂ (ಪ್ರಾಕ್ಟಿಕಲ್ ಪರೀಕ್ಷೆ ಇಲ್ಲದಂತಹ ವಿಷಯಗಳಿಗೂ) ಶೇ.20ರಷ್ಟು ಆಂತರಿಕ ಮೌಲ್ಯಾಂಕನ ನೀಡಲಾಗುತ್ತದೆ. ಶಿಕ್ಷಕರು ಮತ್ತು ಹೆತ್ತವರು ಮಾಡುವ ಮೌಲ್ಯಮಾಪನವನ್ನು ಆಧರಿಸಿ ಈ ಅಂಕ ನೀಡಲಾಗುತ್ತದೆ.
- ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ನೀಡುವ ಸಲುವಾಗಿ ಪ್ರಶ್ನೆಗಳ ಸಂಖ್ಯೆಯನ್ನು ಶೇ.33ರಷ್ಟು ಹೆಚ್ಚಳ ಮಾಡಲಾಗುತ್ತದೆ. ಹೀಗಾಗಿ ಪ್ರಶ್ನೆಪತ್ರಿಕೆ ದೀರ್ಘವಾಗಿದ್ದರೂ ವಿದ್ಯಾರ್ಥಿಗಳಿಗೆ ಉತ್ತರಿಸಲು ಬಹು ಆಯ್ಕೆಗಳು ಸಿಗುತ್ತವೆ.
- ಪ್ರಶ್ನೆಗಳು ಕೌಶಲ ಆಧರಿತ ಮತ್ತು ಸಾಮರ್ಥ್ಯ ಆಧರಿತವಾಗಿದ್ದು, ವಿದ್ಯಾರ್ಥಿಗಳು ವಿಮಶಾìತ್ಮಕವಾಗಿ ಚಿಂತನೆ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಅವರು ತಾವು ಕಲಿತಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಆಲೋಚಿಸಿ, ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಉತ್ತರಗಳು ಪುಸ್ತಕದಲ್ಲಿ ಸಿಗುವುದಿಲ್ಲ.
- 3, 5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಮೌಲ್ಯಮೌಪನ ಸರ್ವೇ ನಡೆಸಲಾಗುತ್ತದೆ.
- ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಶಿಕ್ಷಕರು, ಹೆತ್ತವರು, ಸಮಾನ ಸ್ಕಂಧ ವಿದ್ಯಾರ್ಥಿಗಳ ಗುಂಪು ಮೌಲ್ಯಮಾಪನ ಮಾಡಲಿದೆ. ಜತೆಗೆ ಆಯಾ ವಿದ್ಯಾರ್ಥಿಯೂ ತನ್ನನ್ನು ತಾನೇ ಮೌಲ್ಯಮಾಪನ ಮಾಡುವ ಅವಕಾಶವಿರುತ್ತದೆ.