Advertisement

ಸಿಬಿಎಸ್‌ಇ, ಐಸಿಎಸ್‌ಇ ಪರೀಕ್ಷೆ ನಿರ್ಧಾರ ಇಂದು

08:06 AM Jun 24, 2020 | mahesh |

ಹೊಸದಿಲ್ಲಿ: ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯ ಕ್ರಮದ 10, 12ನೇ ತರಗತಿಗಳ ಬಾಕಿ ಉಳಿದ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಸ್ಪಷ್ಟ ತೀರ್ಮಾನ ಬುಧವಾರ ಪ್ರಕಟವಾಗುವ ಸಾಧ್ಯತೆ ಇದೆ. ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಪ್ರತ್ಯೇಕವಾಗಿ ಅರ್ಜಿಗಳ ವಿಚಾರಣೆ ನಡೆದವು. ಎರಡೂ ಅಂಶಗಳ ವಿಚಾರಣೆ ಜೂ.25ರಂದು ನಡೆಯಲಿದೆ.

Advertisement

ವೇಳಾಪಟ್ಟಿ ಪ್ರಕಾರ ಸಿಬಿ ಎಸ್‌ಇ ಪಠ್ಯಕ್ರಮದ ಬಾಕಿ ಉಳಿದ ವಿಷಯಗಳ ಪರೀಕ್ಷೆ ಜು.1-15ರ ವರೆಗೆ ನಿಗದಿಯಾಗಿದೆ. ನ್ಯಾ.ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ನ್ಯಾಯಪೀಠದ ಮುಂದೆ ನಡೆದ ವಿಚಾರಣೆಯಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ “ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ಅರ್ಥ ಮಾಡಿಕೊಳ್ಳಲಾಗಿದೆ. ಪರೀಕ್ಷೆ ನಡೆಸುವ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುತ್ತದೆ. ಹೀಗಾಗಿ, ವಿಚಾರಣೆಯನ್ನು ಮುಂದೂಡಬೇಕು’ ಎಂದು ಮನವಿ ಮಾಡಿದರು.

ಹೀಗಾಗಿ, ನ್ಯಾಯಪೀಠ ಜೂ.25ಕ್ಕೆ ವಿಚಾರಣೆ ಮುಂದೂಡಿತು. ಅದಕ್ಕೆ ಪೂರಕವಾಗಿ ಸಿಬಿಎಸ್‌ಇ ಆಡಳಿತ ಮಂಡಳಿ ಬುಧವಾರ ಸಭೆ ಸೇರಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದಕ್ಕಿಂತ ಮೊದಲು ಐಸಿಎಸ್‌ಇ ಪಠ್ಯಕ್ರಮದ ಪರೀಕ್ಷೆ ಬಗ್ಗೆ ನಡೆದ ವಿಚಾರಣೆ ವೇಳೆ, ಮಂಡಳಿ ಪರ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆ ಗುರುವಾರ ನಡೆಯಲಿದೆ ಎಂದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠ ಪರೀಕ್ಷೆ ನಡೆಯುವ ಬಗ್ಗೆ ಮಂಡಳಿಯೇ ತೀರ್ಮಾನಿಸಿ ನಿರ್ಧಾರ ಕೈಗೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next