Advertisement

ಮಾ.31ರ ಬಳಿಕವೇ ಎಲ್ಲ ಪರೀಕ್ಷೆ ನಡೆಸಿ : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚನೆ

09:54 AM Mar 20, 2020 | sudhir |

ಹೊಸದಿಲ್ಲಿ: ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾ.31ರ ಬಳಿಕ ನಡೆಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬುಧವಾರ ಸೂಚನೆ ನೀಡಿದೆ. ಸಿಬಿಎಸ್‌ಇ, ಯುಜಿಸಿ, ಎಐಸಿಟಿಇ, ಜಾಯಿಂಟ್‌ ಎಂಟ್ರನ್ಸ್‌ ಎಕ್ಸಾಮಿನೇಶನ್‌ (ಜೆಇಇ), ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಪನ್‌ ಸ್ಕೂಲಿಂಗ್‌ (ಎನ್‌ಐಓಎಸ್‌)ಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಸಚಿವಾಲಯದ ಕಾರ್ಯದರ್ಶಿ ಅಮಿತ್‌ ಖಾರೆ ತಿಳಿಸಿದ್ದಾರೆ.

Advertisement

ಸದ್ಯ ನಡೆಯುತ್ತಿರುವ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾ.31ರ ವರೆಗೆ ಮುಂದೂಡಲಾಗಿದೆ. ಅನಂತರ ದಿನಗಳಲ್ಲಿ ಅವುಗಳನ್ನು ಮತ್ತೆ ನಡೆಸುವ ಬಗ್ಗೆ ಪರಿಶೀಲನೆ ನಡೆಸಲು ಅವಕಾಶವಿದೆ. ಸದ್ಯ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಅರ್ಥ ವ್ಯವಸ್ಥೆಗೆ ಪ್ಯಾಕೇಜ್‌?: ಇದೇ ವೇಳೆ ದೇಶದ ಅರ್ಥ ವ್ಯವಸ್ಥೆ ಬಗ್ಗೆ ಕೇಂದ್ರ ಸರಕಾರ ಶುಕ್ರವಾರ ನಡೆಸಲಿರುವ ಸಂಪುಟ ಸಭೆಯ ಬಳಿಕ ಪ್ಯಾಕೇಜ್‌ ಪ್ರಕಟಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಹಿತ ಸದ್ಯದ ಬೆಳವಣಿಗೆಗಳನ್ನು ಪರಿಶೀಲಿಸಿ ಅನಂತರ ನಿರ್ಧಾರ ಕೈಗೊಳ್ಳಲಿದ್ದಾರೆಂದು ಖಾಸಗಿ ಟಿವಿ ಚಾನೆಲ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next