Advertisement
ಬಾಲಕರು ಶೇ. 99.13ರಷ್ಟು ಮತ್ತು ಬಾಲಕಿಯರು ಶೇ. 99.67ರಷ್ಟು ಉತ್ತೀರ್ಣರಾಗಿದ್ದಾರೆ. ಒಂದೂವರೆ ಲಕ್ಷವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ್ದರೆ, 70 ಸಾವಿರ ವಿದ್ಯಾರ್ಥಿಗಳು ಶೇ. 95ಕ್ಕೂ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಈ ವರ್ಷ ಪರೀಕ್ಷೆ ನಡೆಸದೇ ಪೂರಕ ಮೌಲ್ಯಮಾಪನ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.
ಇವೆಲ್ಲದರ ನಡುವೆಯೇ 65,000 ವಿದ್ಯಾರ್ಥಿಗಳ ಫಲಿತಾಂಶ ಆ. 5ರಂದು ಪ್ರಕಟಿಸುವುದಾಗಿ ಸಿಬಿಎಸ್ಇ ಮಂಡಳಿ
ತಡೆಹಿಡಿದಿದೆ. 1,060 ಹೊಸ ಶಾಲೆಗಳ ಶೈಕ್ಷಣಿಕ ವರ್ಷದಲ್ಲಿ ಸ್ವಲ್ಪ ಗೊಂದಲ ಇರುವುದರಿಂದ ಆ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಕೂಲಂಕಷ ವಾಗಿ ಸಿದ್ಧಪಡಿಸಲಾಗುತ್ತಿದೆ ಎಂದಿದೆ.