Advertisement
ಜನರಲ್ ಕನ್ಸೆಂಟ್ ಎಂದರೇನು?ಸಿಬಿಐನ ಮುಖ್ಯ ಕಚೇರಿ ದಿಲ್ಲಿಯಲ್ಲಿದ್ದು, ಇದು ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆಯಡಿಯಲ್ಲಿ ಆಡಳಿತ ನಿರ್ವಹಣೆ ಮಾಡುತ್ತಿದೆ. ಹೀಗಾಗಿ ದಿಲ್ಲಿ ಬಿಟ್ಟು ಉಳಿದೆಡೆ ಯಾವುದೇ ಪ್ರಕರ
ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಲ, ಝಾರ್ಖಂಡ್, ಛತ್ತೀಸ್‌ಗಢ, ಕೇರಳ ಮತ್ತು ಮಿಜೋರಾಂ. ಇವುಗಳಲ್ಲಿ 2015ರಲ್ಲೇ ಮಿಜೋರಾಂ ರಾಜ್ಯವು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆದಿತ್ತು. 2018ರಲ್ಲಿ ಉಳಿದ ರಾಜ್ಯಗಳು ಸಾಮಾನ್ಯ ಒಪ್ಪಿಗೆ ಹಿಂಪಡೆದಿವೆ.
Related Articles
ಕೇಂದ್ರ ಸರಕಾರ, ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ. ವಿಪಕ್ಷ ನಾಯಕರು ಮತ್ತು ಬಿಜೆಪಿಯೇತರ ರಾಜ್ಯಗಳಲ್ಲಿನ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿ, ನಡೆಸಿ ಅವರನ್ನು ಬಂಧಿಸಿ ಸಿಲುಕಿಸುತ್ತಿದೆ. ಹೀಗಾಗಿ ಸಿಬಿಐಗೆ ನೀಡಿದ್ದ ಜನರಲ್ ಕನ್ಸೆಂಟ್ ವಾಪಸ್ ಪಡೆದಿದ್ದೇವೆ ಎಂಬುದು ಈ ರಾಜ್ಯಗಳ ಹೇಳಿಕೆ.
Advertisement
ಆಗಿರುವ ಸಮಸ್ಯೆ ಏನು?ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ, ರಾಜ್ಯಗಳು ಸಾಮಾನ್ಯ ಒಪ್ಪಿಗೆ ಹಿಂಪಡೆದಿರುವುದರಿಂದ ಶೇ.70ರಷ್ಟು ಕೇಸುಗಳು ಪೆಂಡಿಂಗ್ ಆಗಿವೆ ಎಂದಿದೆ. 2018ರಿಂದ ಇಲ್ಲಿವರೆಗೆ ಈ 8 ರಾಜ್ಯಗಳಿಗೆ 150 ಮನವಿಗಳನ್ನು ಕಳುಹಿಸಲಾಗಿದೆ. ಇದುವರೆಗೂ ಈ ರಾಜ್ಯಗಳು ಶೇ.30 ಕೇಸುಗಳ ವಿಚಾರಣೆಗೆ ಒಪ್ಪಿಗೆ ನೀಡಿವೆ ಎಂದಿತ್ತು. ಏಕೆಂದರೆ ಈ ರಾಜ್ಯಗಳಲ್ಲಿ ಯಾವುದೇ ಭ್ರಷ್ಟ ಅಧಿಕಾರಿ ಅಥವಾ ರಾಜಕಾರಣಿ ಕುರಿತಂತೆ ತನಿಖೆ ನಡೆಸಬೇಕಾದರೆ ಇವುಗಳ ಒಪ್ಪಿಗೆ ಬೇಕೇಬೇಕು. ಕೇಂದ್ರ ಸರಕಾರಿ ನೌಕರರ ವಿರುದ್ಧ ತನಿಖೆ ನಡೆಸಬಹುದೇ?
ಇತ್ತೀಚೆಗಷ್ಟೇ ಕಲ್ಕತ್ತಾ ಹೈಕೋರ್ಟ್ ತೀರ್ಪೊಂದನ್ನು ನೀಡಿದ್ದು, ಕೇಂದ್ರ ಸರಕಾರಿ ನೌಕರಿಯಲ್ಲಿ ಇರುವ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಾದರೆ, ಸಿಬಿಐಗೆ ಆಯಾ ರಾಜ್ಯಗಳ ಒಪ್ಪಿಗೆ ಬೇಕಿಲ್ಲ ಎಂದು ಹೇಳಿದೆ. ಸದ್ಯ ಈ ತೀರ್ಪು ಪ್ರಶ್ನಿಸಿ ಪಶ್ಚಿಮ ಬಂಗಾಲ ಸರಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಇನ್ನೂ ತೀರ್ಪು ಬಂದಿಲ್ಲ. ಸದ್ಯ ಇದನ್ನೇ ದಾಳವಾಗಿ ಇರಿಸಿಕೊಂಡು ಸಿಬಿಐ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳ ವಿರುದ್ಧದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.