Advertisement

“ಮೂಡಾ’ಅಕ್ರಮ: ಐವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ ವಿಶೇಷ ಕೋರ್ಟ್

08:07 PM Sep 09, 2022 | Team Udayavani |

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಸೇರಿದ 1 ಕೋಟಿ ರೂ. ಅನ್ನು ದುರುಪಯೋಗಪಡಿಸಿದ್ದ ಐವರಿಗೆ ಸಿಬಿಐ ವಿಶೇಷ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ 5,02 ಕೋಟಿ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಎ.ಆರ್‌.ಲಾಜಿಸ್ಟಿಕ್ಸ್‌ನ ಕೆ. ಆನಂದ್‌ ಅಲಿಯಾಸ್‌ ಕೆಬ್ಬಳ್ಳಿ ಆನಂದ್‌, ಫ್ಯೂಚರ್‌ ಫಾರ್ಮ್ ಆ್ಯಂಡ್‌ ಎಸ್ಟೇಟ್‌ ಲಿ. ನ ಸಿಇಒ ನಾಗಲಿಂಗ ಸ್ವಾಮಿ, ರಿಯಲ್‌ ಎಸ್ಟೇಟ್‌ ಏಜೆಂಟ್‌ ಚಂದ್ರಶೇಖರ್‌, ಮೂಡಾದಲ್ಲಿ ಎಫ್ಡಿಎ ಆಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಕೆ. ನಾಗರಾಜ್‌, ಖಾಸಗಿ ವ್ಯಕ್ತಿ ಕೆ.ಬಿ.ಹರ್ಷನ್‌ ಶಿಕ್ಷೆಗೊಳಗಾದವರು.

ಇವರು ಫೋರ್ಜರಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಮೂಡಾಗೆ ಸೇರಿದ 5 ಕೋಟಿ ರೂ. ಅನ್ನು ಅಲಹಾಬಾದ್‌ ಬ್ಯಾಂಕ್‌ನಿಂದ ಇಂಡಿಯನ್‌ ಬ್ಯಾಂಕ್‌ನಲ್ಲಿದ್ದ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.

ಈ ವಿಚಾರ ಬೆಳಕಿಗೆ ಬಂದ ಬಳಿಕ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಿತ್ತು. ಸಿಬಿಐ ಪರ ಸರಕಾರಿ ಅಭಿಯೋಜಕಿ ಹೇಮಾ ವಾದ ಮಂಡಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next