Advertisement
ದೊರಾಂದ ಖಜಾನೆಯಿಂದ ನಿಯಮ ಮೀರಿ 139.5 ಕೋಟಿ ರೂ. ಮೊತ್ತವನ್ನು ವಿಥ್‌ಡ್ರಾ ಮಾಡಿದ ಪ್ರಕರಣ ಇದಾಗಿದೆ. ಈ ಆದೇಶದಿಂದಾಗಿ ಲಾಲು ಯಾದವ್ ಮತ್ತೆ ರಾಂಚಿಯಲ್ಲಿರುವ ಬಿರ್ಸಾ ಮುಂಡಾ ಕೇಂದ್ರೀಯ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಬೇಕಾಗಿದೆ. ಸಿಬಿಐನ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಸುಧಾಂಶು ಕುಮಾರ್ ಶಾಹಿ ಅವರು ತೀರ್ಪು ಪ್ರಕಟಿಸುವ ವೇಳೆ, ಮಾಜಿ ಮುಖ್ಯಮಂತ್ರಿ ಕೋರ್ಟ್‌ನಲ್ಲಿದ್ದರು. ಫೆ.18ರಂದು ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.
ಆದೇಶದ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದಸಿಬಿಐ ಪರ ವಕೀಲ ಬಿ.ಎಂ.ಪಿ. ಸಿಂಗ್ ಒಟ್ಟು 99 ಮಂದಿ ಆರೋಪಿಗಳ ಪೈಕಿ 24 ಮಂದಿ ಖುಲಾಸೆಗೊಂಡಿದ್ದಾರೆ. 34 ಮಂದಿಗೆ ಮೂರು ವರ್ಷ ಶಿಕ್ಷೆಯಾಗಿದೆ. 41 ಮಂದಿಗೆ ಜೈಲು ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಖಾಸಗಿ ಸಂಸ್ಥೆಗಳು ಅಕ್ರಮವಾಗಿ ನೆಲ ಅಗೆದಿದ್ದರೆ ಕ್ರಮ: ಸಿಎಂ ಭರವಸೆ
Related Articles
1. ಚೈಬಾಸಾ ಖಜಾನೆಯಿಂದ 37.70 ಕೋಟಿ ರೂ. ವಿಥ್‌ಡ್ರಾ ಆರೋಪ. ಐದು ವರ್ಷ ಜೈಲು ಶಿಕ್ಷೆ. ಸದ್ಯ ಅವರಿಗೆ ಸುಪ್ರೀಕೋರ್ಟಿಂದ ಜಾಮೀನು.
2. ದೇವಗಢ ಖಜಾನೆಯಿಂದ 89.27 ಲಕ್ಷ ರೂ. ವಿಥ್‌ಡ್ರಾ ಆರೋಪ. 3.5 ವರ್ಷ ಜೈಲು ಶಿಕ್ಷೆ. ಸದ್ಯ ಜಾಮೀನು.
3. ಚೈಬಾಸಾ ಖಜಾನೆಯಿಂದ 33.13 ಕೋಟಿ ರೂ. ವಿಥ್‌ಡ್ರಾ. ಐದು ವರ್ಷ ಜೈಲು. ಸದ್ಯ ಜಾಮೀನು.
4. ದುಮ್ಕಾ ಖಜಾನೆಯಿಂದ 3.76 ಕೋಟಿ ರೂ. ವಿಥ್‌ಡ್ರಾ. 14 ವರ್ಷ ಜೈಲು . ಸದ್ಯ ಜಾಮೀನಿನ ಮೇಲೆ ಬಿಡುಗಡೆ
Advertisement