Advertisement
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ(ಇಡಿ) ಮನವಿಯ ಮೇರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,000 ಕೋಟಿ ರೂ. ವಂಚಿಸಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ಚೋಕ್ಸಿ ವಿರುದ್ಧ 2018ರಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಸೋಮವಾರ ನಡೆದಿದ್ದ ಬೆಳವಣಿಗೆಯಲ್ಲಿ ಇಂಟರ್‌ಪೋಲ್ ನೋಟಿಸ್ ರದ್ದು ಮಾಡಿತ್ತು. ಅದನ್ನು ರದ್ದುಗೊಳಿಸುವಂತೆ ಚೋಸ್ಕಿ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗೆ ಮನವಿ ಸಲ್ಲಿಸಿದ್ದ.
ರೆಡ್ ಕಾರ್ನರ್ ಪಟ್ಟಿಯಿಂದ ಚೋಕ್ಸಿ ಹೆಸರನ್ನು ಇಂಟರ್‌ಪೋಲ್ ಕೈಬಿಟ್ಟಿರುವ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. “ಇಂಥ ವ್ಯಕ್ತಿಗಳಿಗೆ ರಕ್ಷಣೆ ನೀಡುವವರು ದೇಶಪ್ರೇಮದ ಬಗ್ಗೆ ಮಾತನಾಡುವುದು ಒಂದು ತಮಾಷೆಯಾಗಿದೆ,’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ “ಪ್ರತಿಪಕ್ಷಗಳಿಗೆ ಮಾತ್ರ ಇಡಿ, ಸಿಬಿಐ. ಆದರೆ ಸ್ನೇಹಿತರಿಗೆ ಮಾತ್ರ ಬಿಟ್ಟುಬಿಡು. ಮೊದಲು ಲೂಟಿ ಮಾಡು, ನಂತರ ಶಿಕ್ಷಯಿಲ್ಲದೇ ಪರಾರಿಯಾಗು ಎಂಬುದು ಮೋದಿ ಮಾಡೆಲ್ ಆಗಿದೆ,’ ಎಂದು ವ್ಯಂಗ್ಯವಾಡಿದ್ದಾರೆ.
Related Articles
Advertisement